ಕೊರ್ಲಕಟ್ಟಾ ಗ್ರಾಮದ ಸರ್ವೇ ನಂಬರ್ 60(ಬ-11)ರಲ್ಲಿ ಯಮುನಾ ಸುಂಟಗಾರ ಹೆಸರಿನಲ್ಲಿರುವ 3 ಎಕರೆ ಜಮೀನನ್ನು ಮಾಯಾಶ್ರೀ ಪರಶುರಾಮ ತೋರಸ್ಕರ್ ಕುಟುಂಬದವರು ಖರೀದಿಸಿದ್ದರು. ಆದರೆ, ಅಲ್ಲಿ ಉಳುಮೆ ಮಾಡುತ್ತಿದ್ದ ಸಹದೇವ ದಡ್ಡೀಕರ್ ಜಮೀನು ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಜಮೀನಿನ ಬಗ್ಗೆ ಪರಸ್ಪರ ತಕರಾರು ನಡೆಯುತ್ತಿತ್ತು. ಆದರೆ, ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು.