ಗೀತೆ ಪಠಣದಿಂದ ಏಕಾಗ್ರತೆ ಸಾಧ್ಯ Bhagavdgeeta

ಭಟ್ಕಳ ತಾಲೂಕಿನ ಬೈಲೂರಿನ ಶೇರುಗಾರಕೇರಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಭಗವದ್ಗೀತೆಯ (Bhagavdgeeta) ಮೂರನೇ ಅಧ್ಯಾಯ ಸಮರ್ಪಣೆ ಹಾಗೂ ಮಾತೃವಂದನೆ ಕಾರ್ಯಕ್ರಮದಲ್ಲಿ ಅರ್ಚಕ ಗಣೇಶ ಭಟ್ ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲೆ ರೂಪಾ ಖಾರ್ವಿ, ಶಿಕ್ಷಕರಾದ ಉಲ್ಲಾಸ ನಾಯ್ಕ, ಪೂರ್ಣಿಮಾ ನಾಯ್ಕ ಇತರರಿದ್ದರು.

Published on
ಭಟ್ಕಳ: ಮನುಷ್ಯ ತನ್ನ ಜೀವನವನ್ನು ಹೇಗೆ ನಡೆಸಬೇಕು ಎಂಬ ಅಂಶಗಳು ಭಗವದ್ಗೀತೆಯಲ್ಲಿ (Bhagavdgeeta) ಅಡಕವಾಗಿದೆ. ಗೀತೆಯ ಪಠಣದಿಂದ ವಿದ್ಯಾರ್ಥಿಗಳಲ್ಲಿನ ಚಂಚಲತೆ ಮಾಯವಾಗಿ ಏಕಾಗ್ರತೆ ದೊರಕುತ್ತದೆ ಎಂದು ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ರೂಪಾ ಖಾರ್ವಿ ಹೇಳಿದರು.
ತಾಲೂಕಿನ ಬೈಲೂರಿನ ಶೇರುಗಾರಕೇರಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸೋಮವಾರ ಏರ್ಪಡಿಸಿದ್ದ ಭಗವದ್ಗೀತೆಯ ಮೂರನೇ ಅಧ್ಯಾಯ ಸಮರ್ಪಣೆ ಹಾಗೂ ಮಾತೃವಂದನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅರ್ಚಕ ಗಣೇಶ ಭಟ್ ಮಾತನಾಡಿದರು.
ವಿದ್ಯಾರ್ಥಿಗಳು ಭಗವದ್ಗೀತೆಯ ಮೂರನೇ ಅಧ್ಯಾಯ ಪಠಿಸಿದರು. ದೇವಸ್ಥಾನದಲ್ಲಿ ಗೀತೆಗೆ ಸಂಬಂಧಿಸಿದ ವಿಚಾರದ ಕುರಿತಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಶಿಕ್ಷಕ ಉಲ್ಲಾಸ ನಾಯ್ಕ ಸ್ವಾಗತಿಸಿದರು, ಶಿಕ್ಷಕಿ ಪೂರ್ಣಿಮಾ ನಾಯ್ಕ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಮಂಜುನಾಥ ನಾಯ್ಕ, ಮೊಕ್ತೆಸರರಾದ ಉಮೇಶ ನಾಯ್ಕ, ಡಾ. ವಾದಿರಾಜ್, ಮಂಜುನಾಥ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net