ಡಿಸೆಂಬರ್‌ 10 ರಂದು ಮಂಗಳೂರಿನಲ್ಲಿ ಕರಾವಳಿ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ

ಕಾರವಾರದಲ್ಲಿ ಸಚಿವ ಮಂಕಾಳ ವೈದ್ಯ ಸಭೆ ನಡೆಸಿದರು.
ಕಾರವಾರದಲ್ಲಿ ಸಚಿವ ಮಂಕಾಳ ವೈದ್ಯ ಸಭೆ ನಡೆಸಿದರು.
Published on
ಕಾರವಾರ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಏಕ ಗವಾಕ್ಷಿ ಅನುಮತಿ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ. ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.
ಜನವರಿ 10 ರಂದು ಮಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕರಾವಳಿ,ಮಲೆನಾಡು ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶದ ಪೂರ್ವಭಾವಿ ಸಭೆಯನ್ನು ಬುಧವಾರ ಜಿಲ್ಲಾಽಕಾರಿ ಕಚೇರಿಯಲ್ಲಿ ನಡೆಸಿ ಅವರು ಮಾತನಾಡಿದರು.
ಸಿಆರ್‌ಜಡ್, ಅರಣ್ಯ, ಕಂದಾಯ, ಮಾಲಿನ್ಯ ನಿಯಂತ್ರಣ ಮಂಡಳಿ ಹೀಗೆ ಒಬ್ಬ ಪ್ರವಾಸೋದ್ಯಮಿ ಇಲ್ಲಿ ಉದ್ಯಮ ಸ್ಥಾಪಿಸಲು ಹತ್ತಾರು ಕಚೇರಿಗಳಿಗೆ ಓಡಾಡಬೇಕು. ಲಕ್ಷಾಂತರ ರೂ. ಖರ್ಚು ಮಾಡಿ, ನಾಲ್ಕಾರು ವರ್ಷ ಕಾದರೂ ತಾಂತ್ರಿಕ ಕಾರಣದಿಂದ ಉದ್ಯಮ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂಥ ಸಮಸ್ಯೆಗಳನ್ನು ಬಗೆಹರಿಸಿ, ರಾಜ್ಯ,ಹೊರ ರಾಜ್ಯ ಹಾಗೂ ವಿದೇಶಗಳ ಹೂಡಿಕೆದಾರರನ್ನು ಆಹ್ವಾನಿಸಲು ಸಮಾವೇಶ ಮಾಡಲಾಗುತ್ತಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ನಿಟ್ಟಿನಲ್ಲಿ ಈಗಾಗಲೇ ಎರಡು ಹಂತದ ಪೂರ್ವಭಾವಿ ಸಭೆ ನಡೆಸಿದ್ದಾರೆ. ಸಮಾವೇಶದಲ್ಲಿ ನಾವು ಈಗ ಹೂಡಿಕೆದಾರರ ಬೇಡಿಕೆಯನ್ನೂ ಪಟ್ಟಿ ಮಾಡಲಿದ್ದೇವೆ. ಸಿಆರ್‌ಜಡ್, ಅರಣ್ಯ ಮುಂತಾದ ಅನುಮತಿಯ ಸಮಸ್ಯೆಗಳನ್ನು ಬಗೆಹರಿಸಲು ಯಾವ ಕ್ರಮ ವಹಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಗೋವಾ ಹಾಗೂ ಕೇರಳ ಸರ್ಕಾರಗಳ ಪ್ರವಾಸೋದ್ಯಮ ಸಚಿವರಿಗೂ ಆಹ್ವಾನ ನೀಡಲಾಗುವುದು ಇದರಿಂದ ಹೂಡಿಕೆ ಮಾಡುವ ಆಸಕ್ತರು ಅಥವಾ ಉತ್ತಮ ಯೋಜನೆ ಹೊಂದಿರುವ ಬುದ್ದಿವಂತರೂ ಅಂದು ಅಲ್ಲಿಗೆ ಬರಬಹುದು ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಜಿಲ್ಲೆಯ ಜಲಪಾತಗಳಿಗೆ ರಸ್ತೆ, ಕಾಲು ದಾರಿ, ಶೌಚಗೃಹ ಲೈಫ್ ಗಾರ್ಡ್ ಮುಂತಾದ ಮೂಲ ಸೌಕರ್ಯ ಒದಗಿಸುವ ಕೆಲಸವಾಗಬೇಕು ಎಂದರು.
ಹೊನ್ನಾವರ ಡಿಎಫ್‌ಒ ಯೋಗೇಶ ಅವರು ಮಾತನಾಡಿ, ಕೇಂದ್ರ ಅರಣ್ಯ ಮಂತ್ರಾಲಯದ ಮಾರ್ಗಸೂಚಿಗಳನ್ನು ಪಾಲಿಸಿ ಕಾಯಂ ಕಟ್ಟಡಗಳನ್ನು ನಿರ್ಮಿಸದೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಅವಕಾಶವಿದೆ. ಅದಕ್ಕೆ ಪರಿಸರ ಮಂತ್ರಾಲಯದಿAದ ಅನುಮತಿ ಬೇಕಿಲ್ಲ. ಗ್ರಾಮ ಅರಣ್ಯ ಸಮಿತಿ, ಇಕೋ ಕ್ಲಬ್‌ಗಳ ಮೂಲಕ ಅವನ್ನು ನಿರ್ವಹಿಸಬಹುದು ಎಂದರು.
ಸಿಆರ್‌ಜಡ್ ನಿರ್ದೇಶಕರು ಮಾತನಾಡಿ, ಕಾಯ್ದೆ ಜಾರಿಯಲ್ಲಿ ಆಗುತ್ತಿರುವ ತೊಡಕುಗಳನ್ನು ಪಟ್ಟಿ ಮಾಡಿ ಕೊಡಲು ಕೇಂದ್ರ ಪರಿಸರ ಮಂತ್ರಾಲಯ ಅವಕಾಶ ನೀಡಿದೆ. ಸಿಆರ್‌ಜಡ್ ರಿಯಾಯತಿ ಕೇಳಲು ಇದು ಸುವರ್ಣಾವಕಾಶವಾಗಿದೆ. ಕರಾವಳಿ ಅಭಿವೃದ್ಧಿ ಮಾಸ್ಟರ್ ಪ್ಲಾನ್ ಮಾಡಿದರೆ ಅನುಮತಿ ಸಿಗಬಹುದು ಎಂದರು.
ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾಽಕಾರಿ ಕೆ.ಲಕ್ಷಿ÷್ಮÃಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಎಸ್‌ಪಿ ದೀಪನ್ ಎಂ.ಎನ್., ಇತರ ಅಽಕಾರಿಗಳು ಇದ್ದರು. ಎಡಿಸಿ ಸಾಜಿದ್ ಮುಲ್ಲಾ ಸ್ವಾಗತಿಸಿದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಮಂಗಳಗೌರಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
"

ಉತ್ತರ ಕನ್ನಡದಲ್ಲಿ ಕೌಟುಂಬಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಜಿಲ್ಲೆಯಲ್ಲಿರುವ ಅವಕಾಶಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿ ಅವುಗಳನ್ನು ಅಭಿವೃದ್ಧಿ ಮಾಡಲು ಕ್ರಮ ವಹಿಸಬೇಕು. 15 ಸರ್ಕೀಟ್‌ಗಳ ಅಭಿವೃದ್ಧಿ ಮಾಡಬೇಕು.

ಎಸ್.ಜಿ.ಹೆಗಡೆ

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿ ಸದಸ್ಯ

..........

ಉತ್ತರ ಕನ್ನಡ ಜಿಲ್ಲೆ ಜಲಪಾರಗಳಿಗೆ ಹೆಸರಾಗಿದೆ. ಮಳೆಗಾಲದಲ್ಲಿ ಜಲಪಾತಗಳು ಮೈದುಂಬುತ್ತವೆ. ಆದರೆ, ಸುರಕ್ಷತೆಯ ಕಾರಣ ನೀಡಿ ಮಳೆಗಾಲದಲ್ಲಿ ಅವುಗಳಿಗೆ ತೆರಳಲು ನಿರ್ಬಂಧ ಹೇರಲಾಗುತ್ತದೆ. ಬದಲು ಅಲ್ಲಿ ಸುರಕ್ಷತೆ ಒದಗಿಸಿ ವೀಕ್ಷಣೆಗೆ ಅವಕಾಶ ನೀಡಬೇಕು.

ಬೀರಣ್ಣ ನಾಯಕ ಮೊಗಟಾ

ಜಿಲ್ಲಾ ಪ್ರವಾಸೋದ್ಯಮ ಅಧ್ಯಯನ ಸಮಿತಿ ಅಧ್ಯಕ್ಷ

..........

ಜಿಲ್ಲೆಯ ರಸ್ತೆ ವಿಸ್ತರಣೆ ಮಾಡಿ. ಪ್ರವಾಸೋದ್ಯಮ ಸ್ಥಳಗಳಿಗೆ ಶೌಚಗೃಹ, ಪಾರ್ಕಿಂಗ್ ಮುಂತಾದ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸಿ. ಜಿ.ಎಂ.ಶೆಟ್ಟಿ ಜಿಪಂ ಮಾಜಿ ಸದಸ್ಯ ಜಿಲ್ಲೆಯ ಕರಾವಳಿಯಲ್ಲಿ ಸಾವಿರಾರು ಜನ ಸ್ವಂತ ಜಾಗದಲ್ಲಿ ಹೋಂ, ಸ್ಟೇ, ರೆಸಾರ್ಟ್ಗಳನ್ನು ಕಟ್ಟಿಕೊಂಡಿದ್ದರೂ ಸಿಆರ್‌ಜಡ್ ಕಾಯ್ದೆಯ ಕಾರಣ ಅವುಗಳು ಅಕ್ರಮದ ಹಣೆಪಟ್ಟಿ ಕಟ್ಟಿಕೊಂಡಿವೆ. ಇದರಿಂದ ಸ್ಥಳೀಯ ಸಂಸ್ಥೆಗಳಿಗೂ ಆದಾಯ ನಷ್ಟವಾಗುತ್ತಿದೆ. ಈ ಹಿಂದೆ ಇರುವ ಹೋಂ ಸ್ಟೇ, ರೆಸಾರ್ಟ್ಗಳಿಗಾದರೂ ಸಿಆರ್‌ಜಡ್ ಅನುಮತಿ ಕೊಡುವ ಕೆಲಸವಾಗಬೇಕು.

ರತ್ನಾಕರ ನಾಯ್ಕ

ಜಿಪಂ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net