ಸಿಎಂ ಸಿದ್ದರಾಮಯ್ಯ ನಿಷ್ಪ್ರಯೋಜಕವಾಗಿದ್ದಾರೆ: ಸಚಿವ ಸೋಮಣ್ಣ ಆರೋಪ

ಸಚಿವ ವಿ.ಸೋಮಣ್ಣ ಅವರು ಶಿರಸಿಯಲ್ಲಿ ಮಾರಿಕಾಂಬೆಯ ದರ್ಶನ ಪಡೆದರು
ಸಚಿವ ವಿ.ಸೋಮಣ್ಣ ಅವರು ಶಿರಸಿಯಲ್ಲಿ ಮಾರಿಕಾಂಬೆಯ ದರ್ಶನ ಪಡೆದರು
Published on

ಶಿರಸಿ: ಇಷ್ಟು ಅನುಭವಿಯಾಗಿಯೂ ಸಿದ್ದರಾಮಯ್ಯ ಅವರಿಗೆ ಸಮಾಧಾನವಾಗಿ ಆಡಳಿತ ಮಾಡಲು ಬರುವುದಿಲ್ಲ ಎಂದರೆ ಆಶ್ಚರ್ಯ ಮೂಡಿಸುತ್ತಿದೆ. ಜನಾದೇಶದ ಮೂಲಕ ಆಡಳಿತಕ್ಕೆ ಬಂದಿದ್ದರೂ ಅದನ್ನು ಅವರು ಬಳಕೆ ಮಾಡಲಾಗದಷ್ಟು ನಿಷ್ಪ್ರಯೋಜಕವಾಗಿದ್ದಾರೆ ಎಂದು ಕೇಂದ್ರ ರೈಲು ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಶಿರಸಿಗೆ ಶನಿವಾರ ಆಗಮಿಸಿದ್ದ ಅವರು, ನಗರದ ಮಾರಿಕಾಂಬೆ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಡಿಕೆ ಶಿವಕುಮಾರ ಅವರೊಂದಿಗೆ ಏನೇನು ಮಾತುಕತೆ ನಡೆದಿತ್ತೋ ಅದು ನಮಗೆ ಸಂಬAಧಿಸಿಲ್ಲ. ರಾಜ್ಯದ ಜನತೆ ನಿಮಗೆ ಆಡಳಿತಕ್ಕೆ ಆದೇಶ ನೀಡಿದ್ದಾರೆ. ಅದನ್ನು ಬಳಕೆ ಮಾಡಿಕೊಂಡು ಸಮರ್ಪಕ ಆಡಳಿತ ನಡೆಸುವುದು ಬಿಟ್ಟು ಪದೇ ಪದೇ ಉದ್ಧಟತನ ಮಾಡಿಕೊಂಡು ನಮ್ಮೆಡೆ ಏಕೆ ತೋರಿಸುತ್ತೀರಿ? ಸಿದ್ದರಾಮಯ್ಯ ಅವರ ಕಾರ್ಯ ವೈಖರಿ, ದಿನ ಬೆಳಗಾದರೆ ನಡೆದುಕೊಳ್ಳುವ ರೀತಿ, ಏನು ಮಾಡಿದರೂ ಸರಿ ಎಂಬ ಧೋರಣೆ ಸರಿಯಲ್ಲ. ಮಾತೆತ್ತಿದರೆ ಭಾಗ್ಯ ಎನ್ನುವ ಸಿದ್ಧರಾಮಯ್ಯ ಈಗ ತಮ್ಮ ಭಾಗ್ಯ ಏನಾಗಿದೆ ಎಂಬುದನ್ನು ಅರಿಯಲಿ. ಅಧಕಾರಿಗಳೂ ಈಗ ಅವರ ಮಾತು ಕೇಳುತ್ತಿಲ್ಲ. ಆಡಳಿತವೇ ಹಳಿ ತಪ್ಪಿದಾಗ ಟಿಕೆ ಮಾಡುವುದಷ್ಟೇ ಅವರ ಕಾರ್ಯ ಆಗಿದೆ. ತಾನು ಕುರಿ ಕಾಯ್ದು ಮೇಲೆ ಬಂದವನು ಎನ್ನುವ ಸಿದ್ದರಾಮಯ್ಯ ಇವತ್ತು ಏನು ಕಾಯುತ್ತಿದ್ದಾರೆ? ಅಧಿಕಾರಕ್ಕೆ ಅಂಟಿಕೊAಡು, ತನ್ನ ಪಾಪವನ್ನು ರಾಜ್ಯದ ಜನತೆಯ ಮೇಲೆ, ಇನ್ನೊಂದು ಪಕ್ಷದ ಮೇಲೆ ಹೇರುವುದು ನ್ಯಾಯವೇ? ದಾರಿಯಲ್ಲಿ ಹೋಗುವವನಿಗೆ ಯಾರಿಗೆ ಹುಟ್ಟಿದವನು ಮಗನೆ ಎಂಬ ಗಾದೆಯಂತೆ ಸಿದ್ಧರಾಮಯ್ಯ ಅವರ ಸ್ಥಿತಿ ಆಗಿದೆ. ಸಂಸ್ಕಾರ, ಸಂಸ್ಕೃತಿ ಇಲ್ಲದ ಆಡಳಿತವನ್ನು ಸಿದ್ದರಾಮಯ್ಯ ನೀಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net