ಬಂಕಿಕೊಡ್ಲದಲ್ಲಿ ಸಂಭ್ರಮದ ಚಂಪಾಷಷ್ಠಿ ರಥೋತ್ಸವ

ಗೋಕರ್ಣ ಸಮೀಪದ ಬಂಕಿಕೊಡ್ಲದಲ್ಲಿ ಚಂಪಾಷಷ್ಠಿ ನಿಮಿತ್ತ ಶ್ರೀ ಕಾಶಿ ವಿಶ್ವೇಶ್ವರ ದೇವರ ರಥೋತ್ಸವ ಸಂಭ್ರಮದಿಂದ ನಡೆಯಿತು.
ಗೋಕರ್ಣ ಸಮೀಪದ ಬಂಕಿಕೊಡ್ಲದಲ್ಲಿ ಚಂಪಾಷಷ್ಠಿ ನಿಮಿತ್ತ ಶ್ರೀ ಕಾಶಿ ವಿಶ್ವೇಶ್ವರ ದೇವರ ರಥೋತ್ಸವ ಸಂಭ್ರಮದಿಂದ ನಡೆಯಿತು.
Published on
ಗೋಕರ್ಣ: ಚಂಪಾಷಷ್ಠಿ ನಿಮಿತ್ತ ಹತ್ತಿರದ ಬಂಕಿಕೊಡ್ಲದಲ್ಲಿ ಶ್ರೀ ಕಾಶಿ ವಿಶ್ವೇಶ್ವರ ದೇವರ ರಥೋತ್ಸವ ಬುಧವಾರ ಮಧ್ಯಾಹ್ನ ಭಕ್ತರ ದಟ್ಟಣೆಯ ಮಧ್ಯ ವಿಜೃಂಭಣೆಯಿಂದ ಸಂಪನ್ನವಾಯಿತು. ಶ್ರೀದೇವರು ವಿರಾಜಮಾನವಾಗಿರುವ ರಥ ಪದ್ಧತಿಯಂತೆ ಮಂದಿರದಿಂದ ಹೊರಟು ಶ್ರೀ ಬಂಕನಾಥೇಶ್ವರ ದೇವರ ಸನ್ನಿಧಿಯವರೆಗೆ ಹೋಗಿ ಮರಳಿ ಸ್ವಸ್ಥಾನಕ್ಕೆ ಬಂದು ಸೇರಿತು. ಚಂಪಾಷಷ್ಠಿ ನಿಮಿತ್ತ ಕಳೆದ ಎಂಟು ದಿನಗಳಿಂದ ಆಗಮೋಕ್ತ ಕಾರ್ಯಕ್ರಮಗಳ ಮೂಲಕ ಶ್ರೀ ದೇವರ ಉತ್ಸವ ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net