ಸಿಸಿ ಕ್ಯಾಮರಾಗೆ ಸುರಕ್ಷತೆ ಇಲ್ಲ! CCTV cameras

ಮುಂಡಗೋಡನ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು(CCTV cameras) ಕಿತ್ತುಕೊಂಡು ಹೋಗಿರುವುದು.
ಮುಂಡಗೋಡನ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು(CCTV cameras) ಕಿತ್ತುಕೊಂಡು ಹೋಗಿರುವುದು.
Published on
ಮುಂಡಗೋಡ: ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುರಕ್ಷತೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು (CCTV cameras) ಕಿತ್ತುಕೊಂಡು ಹೋಗುತ್ತಿರುವ ಅಪ್ರಾಪ್ತ ಬಾಲಕರ ವರ್ತನೆಗೆ ಕಡಿವಾಣ ಹಾಕುವಂತೆ ಪಾಲಕರು ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಶಾಲಾ ಆವರಣದಲ್ಲಿ ನಡೆಯುತ್ತಿದ್ದ ಅನೇಕ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಳೆದ 7ತಿಂಗಳ ಹಿಂದೆ ಶಾಲಾ ಆವರಣದಲ್ಲಿ 8 ಸಿಸಿ ಕ್ಯಾಮರಾಗಳನ್ನು ಅವಳವಡಿಸಲಾಗಿದೆ.
ಇವುಗಳಲ್ಲಿ 6 ಕ್ಯಾಮೆರಾಗಳನ್ನು ಸೋಮವಾರ ರಾತ್ರಿ ತೆಗೆದುಕೊಂಡು ಹೋಗಿರುವುದು ಮಂಗಳವಾರ ಬೆಳಕಿಗೆ ಬಂದಿದೆ.
7 ತಿಂಗಳಲ್ಲಿ ಒಟ್ಟು ಮೂರು ಬಾರಿ ಸಿಸಿ ಕ್ಯಾಮೆರಾಗಳು ಕಳ್ಳತನವಾಗಿದೆ. ಅಪ್ರಾಪ್ತ ಬಾಲಕರ ಚಲ್ಲಾಟಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಅಪ್ರಾಪ್ತ ಬಾಲಕರು ಸಿಸಿ ಕ್ಯಾಮೆರಾಗಳನ್ನು ಕಿತ್ತುಕೊಂಡು ಹೋಗುತ್ತಿರುವ ದುಷ್ಕೃತ್ಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪಾಲಕರ ಆತಂಕಕ್ಕೂ ಕಾರಣವಾಗಿದೆ.
ಕಳೆದ ವರ್ಷ ಯಾರೊ ದುಷ್ಕರ್ಮಿಗಳು ಕೊಠಡಿಯ ಬಾಗಿಲನ್ನು ಮುರಿದು ಪುಸ್ತಕ ಹಾಗೂ ಹಾಜರಾತಿ ಪುಸ್ತಕವನ್ನು ತೆಗೆದುಕೊಂಡು ಹೋಗಿದ್ದರು. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಪುಸ್ತಕ ಇಲ್ಲದೆ ಪರದಾಡುವಂತಾಗಿತ್ತು.
ಪ್ರತಿದಿನವು ಸಂಜೆ ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಆಡುವ ನೆಪದಲ್ಲಿ ಕೆಲವರು ಅನೈತಿಕ ಚಟುವಟಿಕೆ ನಡೆಸುತ್ತಿರುವುದಾಗಿ ಆರೋಪಗಳು ಸಾರ್ವಜನಿಕರಿಂದ ಅಗಾಗ ಕೇಳಿಬರುತ್ತಿವೆ.

ಕಡಿವಾಣ ಹಾಕಿ

ರಾತ್ರಿ ವೇಳೆ ಶಾಲಾ ಆವರಣದಲ್ಲಿ ಕೆಲ ಕಿಡಗೇಡಿಗಳು ಮದ್ಯಪಾನ ಮಾಡಿ ಮದ್ಯದ ಬಾಟಲ್ ಹಾಗೂ ಪೌಚ್‌ಗಳನ್ನು ಅಲ್ಲಿಯೇ ಬಿಸಾಕಿ ಹೋಗುತ್ತಿರುವುದು ಕಂಡುಬಂದಿದೆ.

ಸಿಸಿಟಿವಿ ಕಿತ್ತುಕೊಂಡು ಹೋದವರು ಅಪ್ರಾಪ್ತ ಬಾಲಕರಾಗಿದ್ದರಿಂದ ಠಾಣೆಯಲ್ಲಿ ದೂರು ನೀಡಿಲ್ಲ. ಬಾಲಕರ ಪಾಲಕರೇ ಹೊಸ ಸಿಸಿ ಕ್ಯಾಮೆರಾಗಳನ್ನು ಕೊಡಿಸುವುದಾಗಿ ಹೇಳಿದ್ದಾರೆ. ಪದೆ ಪದೆ ಘಟನೆಗಳು ನಡೆಯುತ್ತಿರುವುದರಿಂದ ರಾತ್ರಿ ವೇಳೆ ಕಾವಲುಗಾರನನ್ನು ನೇಮಿಸುವಂತೆ ಇಲಾಖೆಗೆ ಪತ್ರ ಬರೆದಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net