ಉಜ್ವಲ ಭವಿಷ್ಯಕ್ಕೆ ವೃತ್ತಿ ಮಾರ್ಗದರ್ಶನ ಸಹಕಾರಿ Career guidance

ಕುಮಟಾದ ಡಾ. ಬಾಳಿಗಾ ಕಾಲೇಜ್‌ನಲ್ಲಿ ಉನ್ನತಿ ನೆಕ್ಸ್ಟ್ ತರಬೇತಿಗೆ (Career guidance)ಪತ್ರಕರ್ತ ಶಂಕರ ಶರ್ಮಾ ಚಾಲನೆ ನೀಡಿದರು.
ಕುಮಟಾದ ಡಾ. ಬಾಳಿಗಾ ಕಾಲೇಜ್‌ನಲ್ಲಿ ಉನ್ನತಿ ನೆಕ್ಸ್ಟ್ ತರಬೇತಿಗೆ (Career guidance)ಪತ್ರಕರ್ತ ಶಂಕರ ಶರ್ಮಾ ಚಾಲನೆ ನೀಡಿದರು.
Published on
ಕುಮಟಾ: ಎಲ್ಲ ಕ್ಷೇತ್ರಗಳಲ್ಲಿ ಸಹಸ್ರಾರು ಸುಶಿಕ್ಷಿತರನ್ನು ನೀಡಿರುವ ಕೆನರಾ ಕಾಲೇಜ್ ಸೊಸೈಟಿ ತನ್ನ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕೋಶದ ಮೂಲಕ ಜೀವನ ಕೌಶಲದಂತಹ ಅತಿಆದ್ಯತೆಯ ತರಬೇತಿಗಳನ್ನು (Career guidance) ಆಯೋಜಿಸಿ ಸುಸ್ಥಿರ ವೃತ್ತಿಯೆಡೆಗೆ ಕೈಹಿಡಿದು ನಡೆಸುತ್ತಾ ಬಂದಿದೆ.
ತರಬೇತಿಯ ಪ್ರಯೋಜನ ಪಡೆದುಕೊಂಡು ಉಜ್ವಲ ಭವಿಷ್ಯ ತಮ್ಮದಾಗಿಸಿಕೊಳ್ಳಬೇಕು ಎಂದು ಪತ್ರಕರ್ತ ಶಂಕರ ಶರ್ಮಾ ಹೇಳಿದರು.
ಇಲ್ಲಿನ ಕೆನರಾ ಕಾಲೇಜು ಸೊಸೈಟಿ ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವೃತ್ತಿ ಮಾರ್ಗದರ್ಶನ ಕೋಶದೊಂದಿಗೆ ಎಸ್‌ಜಿಬಿಎಸ್ ಉನ್ನತಿ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 30 ದಿನಗಳ ಉನ್ನತಿ ನೆಕ್ಸ್ಟ್ ಜೀವನ ಕೌಶಲ ತರಬೇತಿ ತರಗತಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದೆ ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಇಂಥ ಜೀವನ ಕೌಶಲ್ಯ ತರಬೇತಿ, ವೃತ್ತಿ ಮಾರ್ಗದರ್ಶನ ಲಭ್ಯವಿರಲಿಲ್ಲ. ಅವಕಾಶಗಳಿಗೆ ತೆರೆದುಕೊಳ್ಳುವುದು ಕಷ್ಟವಿತ್ತು. ಇಂದು ಉನ್ನತಿ ಫೌಂಡೇಷನ್‌ನಂತಹ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳ ಮೂಲಕ ವೃತ್ತಿ ಮಾರ್ಗದರ್ಶನ ಮಾಡುತ್ತ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗುತ್ತಿವೆ ಎಂದರು.
ಕೆನರಾ ಕಾಲೇಜ್ ಸೊಸೈಟಿ ಚೇರ್ಮನ್ ಹನುಮಂತ ಕೆ. ಶಾನಭಾಗ ಮಾತನಾಡಿ, ಪದವಿ ಅಥವಾ ಉದ್ಯೋಗ ಗಳಿಕೆಯೊಂದೇ ಬದುಕಿನ ಸಫಲತೆಗೆ ಸಾಲದು, ನಿರ್ದಿಷ್ಟ ಸಾಧನೆ ಮತ್ತು ಬದುಕಿನ ಉನ್ನತಿಗೆ ಜೀವನ ಕೌಶಲ ಬೇಕು ಎಂದರು.
ಸೊಸೈಟಿ ಸದಸ್ಯರಾದ ಪವನ ಪ್ರಭು, ಸಂದೀಪ ನಾಯಕ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ವಿನಾಯಕ ಎಸ್. ಭಟ್ ಹಾಗೂ ಸಂಯೋಜಕ ಡಾ. ಪ್ರಕಾಶ ಪಂಡಿತ ಮಾತನಾಡಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿ ಉನ್ನತಿ ಫೌಂಡೇಷನ್‌ನ ಎಂ.ಎ. ಬಾಬ್ಬಿ, ಸಂಸ್ಥೆಯ ಕಾರ್ಯಯೋಜನೆಗಳು ಹಾಗೂ ತರಬೇತಿಯ ಸಮಗ್ರ ಚಿತ್ರಣ ನೀಡಿದರು. ಡಾ. ಶಿವಾನಂದ ಬುಳ್ಳಾ, ದೀಕ್ಷಾ ಹಾಗೂ ಸಿಂಧು ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net