ಹಳಿಯಾಳ: ಚಾಲಕನ ನಿಯಂತ್ರಣ ತಪ್ಪಿ ಎನ್ ಡಬ್ಲ್ಯುಕೆಆರ್ ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಹಳಿಯಾಳ ಕಲಘಟಗಿ ರಾಜ್ಯ ಹೆದ್ದಾರಿಯಲ್ಲಿ ಬಾಣಸಗೇರಿ ಸಮೀಪ ಘಟನೆ ನಡೆದಿದ್ದು, 15 ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿ 38 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಚಾಲಕ ಹಾಗೂ ಒಬ್ಬ ಮಹಿಳೆ ಗಂಭೀರ ಗಾಯಗೊಂಡಿದ್ದಾನೆ.
ಬಾಲಕನೋರ್ವ ಬಸ್ ಒಳಗೇ ಸಿಕ್ಕಿಕೊಂಡಿದ್ದು, ಆತನನ್ನು ಹೊರ ತೆಗೆದು ರಕ್ಷಿಸಲು ಜನ ಒಂದುವರೆ ತಾಸಿನಿಂದ ಹರಸಾಹಸ ಪಡುತ್ತಿದ್ದಾರೆ.
ಬಸ್ ಗ್ರಾಮೀಣ ಭಾಗದಿಂದ ಹಳಿಯಾಳಕ್ಕೆ ಬರುತ್ತಿತ್ತು. ಗಾಯಾಳುಗಳನ್ನು, ಹಳಿಯಾಳ ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ ನಲ್ಲಿ, ಶಾಲೆ, ಕಾಲೇಜ್ ವಿದ್ಯಾರ್ಥಿಗಳೇ ತುಂಬಿದ್ದರು. ಅಪಘಾತದಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, 10 ಕಿಮೀ ದೂರದವರೆಗೆ ವಾಹನಗಳು ನಿಂತಿದ್ದವು.