ಹಳಿಯಾಳ: ಗರ್ಭಿಣಿ ಸ್ತ್ರೀಯರಿಗೆ ಸೀಮಂತ (ಕುಪ್ಪಸ) ಮಾಡುವ ಸಂಪ್ರದಾಯ ಸಾಮಾನ್ಯ. ಆದರೇ, ಹಳಿಯಾಳ ಪಟ್ಟಣದ ನಿವಾಸಿ ಪ್ರೇಮಾ ಮತ್ತು ಪ್ರಭು ಶಿಗ್ಲಿ ಅವರು ತಮ್ಮ ಮನೆ ಸಾಕು ನಾಯಿ ಸೋನಿ ಚೊಚ್ಚಲ ಗರ್ಭಿಣಿಯಾಗಿರುವುದಕ್ಕೆ ಸೀಮಂತ ಮಾಡುವ ಮೂಲಕ ಪ್ರಾಣಿಗಳನ್ನು ಮನೆ ಮಕ್ಕಳಂತೆ ನೋಡಿಕೊಳ್ಳಬೇಕೆಂಬ ಪ್ರೀತಿಯ ಸಂದೇಶ ನೀಡಿದ್ದಾರೆ.
ಪ್ರಭು ಮತ್ತು ಪ್ರೇಮಾ ದಂಪತಿಗಳಿಗೆ ಹೆಣ್ಣು ಮಕ್ಕಳಿಲ್ಲ ಹೀಗಾಗಿ ತಮ್ಮ ದೇಸಿ ತಳಿಯ ಶ್ವಾನವನ್ನೇ ತಮ್ಮ ಮಗಳಂತೆ ಸಾಕಿದ್ದು ಸದ್ಯ ಸೋನಿ ಈ ಮನೆಯ ಮುದ್ದಿನ ಮಗಳಾಗಿದ್ದು ಒಂದುವರೆ ವರ್ಷ ವಯಸ್ಸಿನವಳಾಗಿದ್ದಾಳೆ. ಸೋನಿಯ ಪ್ರೀತಿ ಮತ್ತು ಸ್ವಭಾವಕ್ಕೆ ಮಾರುಹೋದ ಶಿಗ್ಲಿ ಕುಟುಂಬವು ಶುಕ್ರವಾರ ರಾತ್ರಿ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯ ನೆರವೆರಿಸಿದೆ.