ಸಿದ್ದಾಪುರ ತಾಲೂಕಿನ ಗೋಳಿಕೈನಲ್ಲಿ ಅರಣ್ಯ ಇಲಾಖೆಯವರು ಅಡಕೆ ಮರ ಕಡಿದಿರುವುದನ್ನು ಶಾಸಕ ಭೀಮಣ್ಣ ನಾಯ್ಕ ಪರಿಶೀಲಿಸಿದರು. ಕೆ.ಜಿ. ನಾಗರಾಜ, ವಿ.ಎನ್. ನಾಯ್ಕ, ಎಸ್.ಕೆ. ಭಾಗ್ವತ್, ಉಮೇಶ ನಾಯ್ಕ ಇತರರಿದ್ದರು.
Published on:
Copied
Follow Us
ಸಿದ್ದಾಪುರ: ನ್ಯಾಯಾಲಯದ ಆದೇಶದಂತೆ ಫಲಾನುಭವಿಯೇ ಖುಲ್ಲಾಪಡಿಸಿ ಎಂದ ನಂತರ ತೆರವುಗೊಳಿಸಿದ ಅತಿಕ್ರಮಣದ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ತಾಲೂಕಿನ ಗೋಳಿಕೈಯಲ್ಲಿ ಅರಣ್ಯ ಇಲಾಖೆಯವರು ಅಡಕೆ ಮರ ಕಡಿದ ಜಾಗಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ ಹತ್ತಾರು ವರ್ಷಗಳಿಂದ ಬೆಳೆಸಿ ಪೋಷಿಸಿದ ಗಿಡ-ಮರಗಳನ್ನು ಕಡಿದಾಗ ನಿಜಕ್ಕೂ ನೋವಾಗುತ್ತದೆ.
ಗೋಳಿಕೈ ವಿಚಾರದಲ್ಲಿ ತೆರವುಗೊಳಿಸಿದ ಜಾಗ ಜಿಪಿಎಸ್ ಆಗಿರಲಿಲ್ಲ. ಹಾಗಾಗಿ ನ್ಯಾಯಾಲಯ ಕೂಡ ತೆರವುಗೊಳಿಸಲು ಆದೇಶ ನೀಡಿತ್ತು ಎಂಬ ಮಾಹಿತಿ ದೊರೆತಿದೆ.
ಫಸಲು ಬರುವ ಮರಗಳನ್ನು ಕಡಿದಿರುವುದನ್ನು ನೋಡಿದರೆ ಎಂತಹವರ ಮನ ಕೂಡ ಕಲಕುತ್ತದೆ. ಅರಣ್ಯ ಇಲಾಖೆಯ ಗಾರ್ಡ್ ಹಾಗೂ ವಾಚಮನ್‌ಗಳು ಕತ್ತೆ ಕಾಯುತ್ತಿದ್ದಾರೆಯೇ? ಕಡಿಯುವ ಬದಲು ಅರಣ್ಯ ಇಲಾಖೆ ಗಡಿ ಗುರುತಿಸಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಬಹುದಿತ್ತು.
ಅತಿಕ್ರಮಣ ಭೂಮಿಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಇನ್ನು ಮುಂದೆ ಯಾವುದೇ ಬೆಳೆಯನ್ನು ನಾಶಮಾಡುವಂತಿಲ್ಲ. ಅರಣ್ಯ ಇಲಾಖೆ ರೈತರ ಜಮೀನು ಹಾಗೂ ಇಲಾಖೆಯ ಭೂಮಿಯ ನಡುವೆ ಗಡಿಯನ್ನು ಗುರುತಿಸಿ ಅಗಳ ತೆಗೆದು ಸ್ಪಷ್ಟ ಚಿತ್ರಣ ನೀಡಬೇಕು. ಯಾರೇ ಹೊಸದಾಗಿ ಅತಿಕ್ರಮಣ ಮಾಡಿ ಅಡಕೆ ಮತ್ತಿತರ ಬೆಳೆ ಬೆಳೆಯಲು ಮುಂದಾದರೆ ಮೊದಲೇ ತಡೆಯಬೇಕು. ಗಿಡ ನೆಟ್ಟು ಬೆಳೆದ ನಂತರ ಕಡಿಯಲು ಮುಂದಾದರೆ ಜನ ಸುಮ್ಮನಿರುವುದಿಲ್ಲ. ರೈತರು ಸಿಡಿದೆದ್ದರೆ ಯಾವ ಕಾನೂನು ಹಾಗೂ ಇಲಾಖೆ ಲೆಕ್ಕಕ್ಕೆ ಬರುವುದಿಲ್ಲ. ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು.
ತಾಲೂಕಿನ ಗೋಳಿಕೈ ಅತಿಕ್ರಮಣಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಪಿಎಸ್ ಆಗದೇ ಇರುವ ಜಾಗವನ್ನು ಮಾತ್ರ ನಾವು ಮುಟ್ಟಿದ್ದೇವೆ. ಜಿಪಿಎಸ್ ಆಗಿರುವ ಅತಿಕ್ರಮಣ ಭೂಮಿ ತೆರವಿಗೆ ಇಲಾಖೆ ಮುಂದಾಗಿಲ್ಲ.