ತಾವರೆಕೊಪ್ಪಕ್ಕೆ(bison) ಕಾಡುಕೋಣ ಶಿಫ್ಟ್

ಸಿದ್ದಾಪುರ ತಾಲೂಕಿನ ಹಕ್ಲಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದ ಕಾಡಿಕೋಣವನ್ನು (bison) ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು.
ಸಿದ್ದಾಪುರ ತಾಲೂಕಿನ ಹಕ್ಲಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದ ಕಾಡಿಕೋಣವನ್ನು (bison) ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು.
Published on
ಸಿದ್ದಾಪುರ: ತಾಲೂಕಿನ ಗವಿನಗುಡ್ಡ ಗ್ರಾಮದ ಹಕ್ಲಮನೆಯ ಅರಣ್ಯ ಸರ್ವೇ ನಂ. 40ರ ರೈತರ ತೋಟವೊಂದಕ್ಕೆ ನೀರು ಕುಡಿಯಲು ಬಂದು ಅಕಸ್ಮಾತ್ ಬಿದ್ದು ಮುಂಗಾಲು ಮುರಿದುಕೊಂಡು ಜೀವನ್ಮರಣದ ಮಧ್ಯೆ ಮೂರು ದಿನಗಳಿಂದ ಹೋರಾಡುತ್ತಿದ್ದ ಕಾಡುಕೋಣ (bison) ವನ್ನು ಅರಣ್ಯ ಇಲಾಖೆ ಚಿಕಿತ್ಸೆಗಾಗಿ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಗುರುವಾರ ಸ್ಥಳಾಂತರ ಮಾಡಿದೆ.
ಸೋಮವಾರ ರಾತ್ರಿ ಮೇವು ಹಾಗೂ ನೀರು ಕುಡಿಯಲು ಬಂದಿದ್ದ ಕಾಡುಕೋಣ ಆಕಸ್ಮಿಕವಾಗಿ ಬಿದ್ದು ಕಾಲು ಮುರಿದುಕೊಂಡಿತ್ತು. ಮೇಲೆಳಿಸಲು ಗ್ರಾಮಸ್ಥರು ಪ್ರಯತ್ನಪಟ್ಟು ಬಳಿಕ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇದಕ್ಕೆ ಇಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ತಿಳಿಸಿದರು. ಗುರುವಾರ ಶಿವಮೊಗ್ಗದಿಂದ ಅರಿವಳಿಕೆ ತಜ್ಞರನ್ನು ಕರೆಸಿ ಚುಚ್ಚುಮದ್ದು ಕೊಡಿಸಿ ನಂತರ ಕಾಡುಕೋಣವನ್ನು ಕ್ರೇನ್ ಮತ್ತು ಜೆಸಿಬಿ ಮೂಲಕ ಮೇಲಕ್ಕೆತ್ತಿ ವಾಹನಕ್ಕೆ (ಲಾರಿ) ಹಾಕಿ ತಾವರೆಕೊಪ್ಪಕ್ಕೆ ಸಾಗಿಸಿದ್ದಾರೆ.
ಡಿಎಫ್‌ಒ ಸಂದೀಪ್ ಸೂರ್ಯವಂಶಿ, ಸಿದ್ದಾಪುರ ಎಸಿಎಫ್ ಪವಿತ್ರಾ ಯು.ಜೆ., ಆರ್‌ಎಫ್‌ಒ ಅಜಯಕುಮಾರ್ ಎಂ.ಎಸ್. ಹಾಗೂ ಸಿಬ್ಬಂದಿ ಇದ್ದರು. ಸ್ಥಳೀಯರು ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net