

ಕಾರವಾರ:ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೋಡಿಬಾಗದ ಓಶನ್ ಮಿಸ್ಟ್ ಅಪಾರ್ಟ್‌ಮೆಂಟ್ ಸಮೀಪ ನಡೆದಿದೆ.
ಶಿರಸಿಯ ತೇಜಸ್ವಿ ಪವಾರ್(35) ಮೃತರು. ಸಹ ಸವಾರ ಶಿರಸಿಯ ಈಶ್ವರ ಆಚಾರಿ ಗಂಭೀರವಾಗಿ ಗಾಯಗೊಂಡಿದ್ದು, ಕ್ರಿಮ್ಸ್ಗೆ ಸೇರಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿ ಉರಿಯಿತು. ಅಗ್ನಿಶಾಮಕ ಅಧಿಕಾರಿಗಳು ಬಂದು ಬೆಂಕಿ ನಂದಿಸಿದ್ದಾರೆ.
ಬೈಕ್ ಸವಾರ ಒನ್‌ವೇನಲ್ಲಿ ಬಂದಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಾರಿನ ಚಾಲಕ ಗೋವಾದ ದಾದಾಪಿರ್ ಹಜರತ್‌ಸಾಬ್ ಶೇಖ್ ದೂರು ನೀಡಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ದೀಪನ್ ಭೇಟಿ ನೀಡಿ ಪರಿಶೀಲಿಸಿದರು.