Mari festival ಭಟ್ಕಳ ಮಾರಿ ಹಬ್ಬ ಸಂಪನ್ನ

ಭಟ್ಕಳ ತಾಲೂಕಿನ ಸುಪ್ರಸಿದ್ಧ ಮಾರಿಯಮ್ಮನ ಮೂರ್ತಿಯನ್ನು ಭಕ್ತಾಧಿಗಳ ಹರ್ಷೋದ್ಗಾರಗಳೊಂದಿಗೆ ಮೆರವಣಿಗೆ ಮೂಲಕ ಜಾಲಿ ಕೋಡಿ ಸಮುದ್ರ ತೀರಕ್ಕೆ ಒಯ್ದು ವಿಸರ್ಜಿಸಲಾಯಿತು.
ಭಟ್ಕಳ ತಾಲೂಕಿನ ಸುಪ್ರಸಿದ್ಧ ಮಾರಿಯಮ್ಮನ ಮೂರ್ತಿಯನ್ನು ಭಕ್ತಾಧಿಗಳ ಹರ್ಷೋದ್ಗಾರಗಳೊಂದಿಗೆ ಮೆರವಣಿಗೆ ಮೂಲಕ ಜಾಲಿ ಕೋಡಿ ಸಮುದ್ರ ತೀರಕ್ಕೆ ಒಯ್ದು ವಿಸರ್ಜಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಾಲಿಕೋಡಿ ಸಮುದ್ರ ತೀರದಲ್ಲಿ ವಿಧಿವಿಧಾನಗಳೊಂದಿಗೆ ಮೂರ್ತಿ ವಿಸರ್ಜನೆ

ಭಟ್ಕಳ: ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ತಾಲೂಕಿನ ಸುಪ್ರಸಿದ್ಧ ಮಾರಿ ಹಬ್ಬ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಗುರುವಾರ ಸಂಜೆ ಮಾರಿ ದೇವಿಯ ಮೂರ್ತಿ ವಿಸರ್ಜಿಸುವ ಮೂಲಕ ಸಂಪನ್ನಗೊಂಡಿತು.

ಶಾಸಕ ಮಂಕಾಳ ವೈದ್ಯ ಹಾಗೂ ಅವರ ಅಭಿಮಾನಿ ಬಳಗದವರು ದೇವಿಗೆ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗುವಂತೆ ಪ್ರಾರ್ಥಿಸಿದರು. ಶಾಸಕ ಮಂಕಾಳ ವೈದ್ಯ ಮಾತನಾಡಿ, ಸಕಾಲಕ್ಕೆ ಮಳೆ, ಬೆಳೆ ಆರೋಗ್ಯ ವೃದ್ಧಿ ದೊರಕಿ ನಾಡು ಸಮೃದ್ಧಿಯಾಗಿರಲಿ ಎಂದು ದೇವಿಯನ್ನು ಪ್ರಾರ್ಥಿಸಲಾಗಿದೆ ಎಂದರು. ವಿಸರ್ಜನೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ದೇವಿಯ ಮೂರ್ತಿಯನ್ನು ನಗರದ ಮಾರಿಗುಡಿಯಿಂದ ಭಕ್ತರು, ಸ್ವಯಂಸೇವಕರು, ಆಡಳಿತ ಮಂಡಳಿ ಸದಸ್ಯರುಗಳು ಸೇರಿ ಜಾಲಿಕೋಡಿಯ ಸಮುದ್ರ ತೀರಕ್ಕೆ ಒಯ್ದು ಅಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಿದರು.
ಮಧ್ಯಾಹ್ನ 5 ಗಂಟೆ ಸುಮಾರಿಗೆ ಸ್ವಯಂಸೇವಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಮಾರಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಜಾಲಿಕೋಡಿ ಸಮುದ್ರ ತೀರಕ್ಕೆ ಕೊಂಡೊಯ್ದು ವಿಧಿವಿಧಾನಗಳ ಮೂಲಕ ವಿಸರ್ಜಿಸುವುದರೊಂದಿಗೆ ಮಾರಿ ಜಾತ್ರೆ ಸಂಪನ್ನಗೊಂಡಿತ್ತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪಾದ ಕಂಚುಗಾರ, ಸಂದೀಪ ಶೇಟ್, ಪ್ರೀತಮ್ ಶೇಟ್, ಕೇಶವ ನಾಯ್ಕ, ಕೃಷ್ಣಾನಂದ ಮಹಾಲೆ, ಮಾದೇವ ಮೊಗೇರ, ಮಾಜಿ ಅಧ್ಯಕ್ಷ ಪರಮೇಶ್ವರ ನಾಯ್ಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net