ಆದರೆ, ಅಧಿಕಾರಿಗಳ ವಾದ ಒಪ್ಪದ ಆಯೋಗವು, ಬ್ಯಾಂಕ್ ಅಧಿಕಾರಿಗಳಿಂದ ಮೊದಲು ಯಾವುದೇ ತಪ್ಪು ನಡೆದಿಲ್ಲ. ಆದರೆ, ವಂಚನೆಯಾದ ಬಗ್ಗೆ ಗ್ರಾಹಕ ದೂರು ನೀಡಿದ ತಕ್ಷಣ ಬ್ಯಾಂಕ್ ಅಧಿಕಾರಿಗಳು ಕ್ರಮ ವಹಿಸಬಹುದಿತ್ತು. ಖಾತೆ ಫ್ರೀಜ್ ಮಾಡಿ, ಮಧ್ಯವರ್ತಿ ಬ್ಯಾಂಕ್‌ನಿಂದ ಹಣವನ್ನು ವಾಪಸ್ ಪಡೆಯಲು ಅವಕಾಶವಿತ್ತು. ಆ ವಿಳಂಬಕ್ಕೆ ಬ್ಯಾಂಕ್ ಅಧಿಕಾರಿಗಳೇ ಜವಾಬ್ದಾರರು ಎಂದು ಅಭಿಪ್ರಾಯಪಟ್ಟಿದೆ.