ಮಧ್ಯಾಹ್ನ ಆತ್ಮಲಿಂಗಕ್ಕೆ ಮಹಾಪೂಜೆ ಮತ್ತು ಬಲಿಸೇವೆ ನಡೆಯಿತು. ಮಹಾಶಿವರಾತ್ರಿ ಪ್ರಥಮ ದಿನದ ಪ್ರಾರಂಭೋತ್ಸವದಲ್ಲಿ ಮಂದಿರದ ಪ್ರಧಾನ ಅರ್ಚಕರುಗಳಾದ ವೇ.ವಿಶ್ವೇಶ್ವರ ಅಡಿ, ವೇ.ಗಣಪತಿ ಗಜಾನನ ಹಿರೇ, ವೇ.ಅಮೃತೇಶ ಹಿರೇ, ವೇ.ಗಣಪತಿ ಶಿವರಾಮ ಹಿರೇ, ವೇ.ಲಕ್ಷ್ಮೀನಾರಾಯಣ ಅಡಿ, ವೇ.ಸುಬ್ರಹ್ಮಣ್ಯ ಅಡಿ, ಕ್ಷೇತ್ರದ ಪ್ರಧಾನ ಪುರೋಹಿತರಾದ ವೇ.ಉದಯ ಉಪಾಧ್ಯ, ವೇ.ಮಹಾಬಲ ಉಪಾಧ್ಯ, ವೇ.ಪ್ರಭಾಕರ ದೀಕ್ಷಿತ, ವೇ.ಗಜಾನನ ಉಪಾಧ್ಯ, ವೇ.ಉದಯ ಮಯ್ಯರ್, ವೇ.ಗಣೇಶ ಜೋಗಳೇಕರ, ಉಪಾಧಿವಂತ ವೇ.ಸುಬ್ರಹ್ಮಣ್ಯ ಪಂಡಿತ, ಗಣಪತಿ ಪಂಡಿತ ಮತ್ತಿತರ ಪ್ರಮುಖರು ಸಹಯೋಗವಿತ್ತರು. ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ ಮತ್ತು ಸಿಬ್ಬಂದಿ ನಿರ್ವಹಿಸಿದರು.