ಆದರೆ, ಆ ದೂರು ದಾಖಲಾಗುವ ಮೊದಲೇ ಸುಚಿತ್ರಾ ನಾಯ್ಕ, ಕಮಲಾಕರ ಹೆಗಡೆ ಹಾಗೂ ಇತರರು ಮಹೇಶ ನಾಯ್ಕ ಉಳಿದುಕೊಂಡಿದ್ದ ಅವರ ಅಣ್ಣ ವಸಂತ ನಾಯ್ಕ ಮನೆಗೆ ರಾತ್ರೋ ರಾತ್ರಿ ನುಗ್ಗಿ ಹಲ್ಲೆ ನಡೆಸಿದ್ದರು. ಆ ಗಲಾಟೆಯಲ್ಲಿ ವಸಂತ ನಾಯ್ಕ ಅವರಿಗೆ ಚಾಕು ಇರಿತವಾಗಿದ್ದು, ಅವರು ಮೃತಪಟ್ಟಿದ್ದರು. ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ತನಿಖಾಽಕಾರಿಯಾಗಿ ಆರೊಪಿಗಳನ್ನು ಬಂಧಿಸಿ, ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.