

ಪ್ರಮುಖ ಮುಖ್ಯಾಂಶಗಳು
ಕಳೆದ ನಾಲ್ಕೈದು ವರ್ಷಗಳಿಂದ ಪ್ರವಾಸೋದ್ಯಮದ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಕಡಲ ತೀರವನ್ನು ಬಳಸಿಕೊಂಡು ಬೆಂಕಿ ಹಾಕಿ ಫೋಟೋಶೂಟ್ ಮಾಡಲಾಗುತ್ತಿತ್ತು. ಇದರಿಂದ ಇಲ್ಲಿ ಕಡಲಾಮೆಗಳು ಇಟ್ಟ ಮೊಟ್ಟೆಗಳು ಹಾನಿಯಾಗಿ ಮರಿಗಳು ಸತ್ತು ಹೋಗಿವೆ. ಈ ವರ್ಷ ಸ್ಥಳೀಯರು ಸೇರಿ ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ನೀಡಿ ಇಲ್ಲಿ ಫೈರ್ ಕ್ಯಾಂಪ್ ನಿಷೇಧಿಸಿದ ಪರಿಣಾಮ ಕಡಲಾಮೆಗಳು ಮತ್ತೆ ತೀರಕ್ಕೆ ಬರಲಾರಂಭಿಸಿವೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಕಡಲಾಮೆಗಳ ಸಂರಕ್ಷಣೆ ಕ್ರಮವಹಿಸಬೇಕು.