ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಸಾರ್ವಜನಿಕರು ಕೆಎಸ್‌ಪಿ ಆ್ಯಪ್ ಬಳಸುವ ಮೂಲಕ ಮಾದಕ ವಸ್ತುಗಳ ಕುರಿತಂತೆ ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಎಂದರು. ಜಿಪಂ ಸಿಇಒ ಡಾ.ದಿಲೀಶ್ ಶಶಿ ಮಾತನಾಡಿ, ಮಾದಕ ವಸ್ತು ಸೇವನೆಯ ದುಷ್ಪರಿಣಾಮ ಅದನ್ನು ಸೇವನೆಯ ಮಾಡುವ ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಆತನ ಕುಟುಂಬ ಸೇರಿದಂತೆ ಇಡೀ ಸಮಾಜದ ಮೇಲೆ ಆಗಲಿದೆ ಎಂದರು. ಕಾರ್ಯಕ್ರಮದಲ್ಲಿ ಕ್ರಿಮ್ಸ್ ನ ಡೀನ್ ಡಾ.ಪೂರ್ಣಿಮಾ, ಕಾರವಾರ ಡಿಎಫ್‌ಒ ಆಂತೋನಿ ಮರಿಯಪ್ಪ, ಡಿಎಚ್‌ಒ ಡಾ. ಸಂಜಯ್ ದೊಡ್ಡಮನಿ ವೇದಿಕೆಯಲ್ಲಿದ್ದರು. ಎಎಸ್‌ಪಿ ಕೃಷ್ಣಮೂರ್ತಿ ಸ್ವಾಗತಿಸಿದರು, ಡಿವೈಎಸ್ಪಿ ಗಿರೀಶ್ ವಂದಿಸಿದರು.