ಭಟ್ಕಳ: ಅಕ್ರಮವಾಗಿ ಒಂಟೆಗಳನ್ನು camels ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಕರಣ ಬಾಬರ, ಕೊಲ್ಲಾಪುರದ ಸುಹಾಸ ಸೂರ್ಯವಂಶಿ ಹಾಗೂ ಯಶ ಗೋಟಕಿಂಡೆ ಬಂಧಿತ ಆರೋಪಿಗಳು. ಶಿರಾಲಿ ಕಡೆಯಿಂದ ಉಳ್ಳಾಲ ಕಡೆಗೆ ಲಾರಿ ಮೂಲಕ 3.75 ಲಕ್ಷ ಮೌಲ್ಯದ ಒಂಟೆಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡಲಾಗುತ್ತಿತ್ತು.
ಆರೋಪಿಗಳು ಒಂಟೆಗಳಿಗೆ ನೀರು ಹಾಗೂ ಮೇವು ನೀಡದೆ, ಜಾನುವಾರು ಸಾಗಾಟಕ್ಕೆ ಅಗತ್ಯವಾದ ಸಕ್ಷಮ ಪ್ರಾಧಿಕಾರದ ಪರವಾನಗಿಯಿಲ್ಲದೆ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ವೇಳೆ ಪೊಲೀಸರು ಲಾರಿ ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಲಾರಿ ಸಹಿತ ಒಂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ದೂರು ದಾಖಲಾಗಿದೆ.