ಲಂಬಾಣಿ ಸಮುದಾಯ ಸಭಾಭವನಕ್ಕೆ 20 ಗುಂಟೆ ಜಾಗ ಮಂಜೂರು

ಮುಂಡಗೋಡದ ಗಾಂಧಿನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲರ 287ನೇ ಜಯಂತ್ಯುತ್ಸವವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ನಿರಂಜನ ತಿಪ್ಪೇಶ್ವರ ಸ್ವಾಮಿಜಿ, ಶಂಕರ ಗೌಡಿ, ಜಿ. ಸುಮಾ, ಅಪ್ಪರಾವ್ ಕಲಶೆಟ್ಟಿ ಇತರರಿದ್ದರು.
ಮುಂಡಗೋಡದ ಗಾಂಧಿನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲರ 287ನೇ ಜಯಂತ್ಯುತ್ಸವವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ನಿರಂಜನ ತಿಪ್ಪೇಶ್ವರ ಸ್ವಾಮಿಜಿ, ಶಂಕರ ಗೌಡಿ, ಜಿ. ಸುಮಾ, ಅಪ್ಪರಾವ್ ಕಲಶೆಟ್ಟಿ ಇತರರಿದ್ದರು.
Published on
ಮುಂಡಗೋಡ: ಕೊಟ್ಟ ಮಾತಿನಂತೆ ಲಂಬಾಣಿ ಸಮುದಾಯದ ಸಭಾಭವನ ನಿರ್ಮಾಣಕ್ಕೆ 20 ಗುಂಟೆ ಜಾಗ ಮಂಜೂರು ಮಾಡಿಸಿಕೊಟ್ಟಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಗಾಂಧಿನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲ ಅವರ 287ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಲಂಬಾಣಿ ಸಮುದಾಯದ ಜನರು ಹಲವಾರು ವರ್ಷಗಳಿಂದ ಸಮುದಾಯದ ಸಭಾಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಸುವಂತೆ ಮನವಿ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಜಾಗ ಮಂಜೂರು ಮಾಡಲಾಗಿದೆ. ಸಂತ ಸೇವಾಲಾಲ ಅವರು ಇಡಿ ಮಾನವ ಕುಲಕ್ಕೆ ಉತ್ತಮ ಆದರ್ಶ ಕೊಟ್ಟು ಹೋಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಬೇಕು ಎಂದರು.
ಲಂಬಾಣಿ ಸಮುದಾಯದ ನಿರಂಜನ ತಿಪ್ಪೇಶ್ವರ ಸ್ವಾಮೀಜಿ ಮಾತನಾಡಿ, ಸಂತ ಸೇವಾಲಾಲರು ಕೇವಲ ಒಂದು ಸಮುದಾಯಕ್ಕೆ ಮೀಸಲಾಗಿರದೆ ಎಲ್ಲ ಸಮುದಾಯಗಳ ನಾಯಕರಾಗಿದ್ದಾರೆ ಎಂದರು. ತಹಸೀಲ್ದಾರ್ ಶಂಕರ ಗೌಡಿ, ಬಿಇಒ ಜಿ. ಸುಮಾ, ಆರ್‌ಎಫ್‌ಒ ಅಪ್ಪರಾವ್ ಕಲಶೆಟ್ಟಿ, ಮುಖಂಡರಾದ ಕೃಷ್ಣ ಹಿರಳ್ಳಿ, ಶಾರದಾಬಾಯಿ ರಾಠೋಡ, ರಾಮು ಲಮಾಣಿ, ಪ್ರಶಾಂತ ಲಮಾಣಿ, ಶೇಖರ ಲಮಾಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net