ಮತ್ತೆ ಉತ್ತರ ಕನ್ನಡದಲ್ಲಿ ಗುಡ್ಡ ಕುಸಿತ, ನೀರಿನ ಹರಿವು ಸ್ಥಗಿತ

Land slide at honnavar
Published on

ಹೊನ್ನಾವರ/ಭಟ್ಕಳ: ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಸಾಮಾನ್ಯ ಮಳೆಗೆ ಗುಡ್ಡ ಕುಸಿತ, ನೀರು ನಿಂತು ಹಾನಿಗಳು ಶುರುವಾಗಿವೆ. ಮಂಗಳವಾರ ರಾತ್ರಿ, ಬುಧವಾರ ಹೊನ್ನಾವರ, ಭಟ್ಕಳದಲ್ಲಿ ಉತ್ತಮ ಮಳೆಯಾಗಿದ್ದು,

ಹೊನ್ನಾವರ ತಾಲೂಕಿನಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ಕ್ಕೆ ಹೊಂದಿಕೊಂಡಿರುವ ಗುಡ್ಡೆಬಾಳ ಗ್ರಾಮದ ಬಳಿ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆಯಿತು.
ಹೆದ್ದಾರಿ ಮೇಲೆ ಬಂಡೆಗಲ್ಲು ಸಮೇತ ಗುಡ್ಡ ಕುಸಿದ ಹಿನ್ನಲೆ ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ತವಾಯಿತು. ಬ್ರಹತ್ ವಾಹನ ಸಂಚಾರಿಸದೇ ಹೆದ್ದಾರಿ ಕೆಲಕಾಲ ಬಂದ್ ಆಗಿತ್ತು. ನಂತರ ಬಂಡೆಗಲ್ಲು ಮತ್ತು ಮಣ್ಣನ್ನು ತೆರವುಗೊಳಿಸಿ ಸುಗಮಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಭಟ್ಕಳ ಪಟ್ಟಣದ ಹೃದಯಭಾಗ ಮಾರಿಗುಡಿಯ ಬಳಿಯ ರಸ್ತೆಯಲ್ಲಿ ನೀರು ಹರಿದು ವಾಹನ ಸವಾರರು ಪರದಾಡುವಂತಾಯಿತು. ಪಾದಚಾರಿಗಳು ರಸ್ತೆಯ ಬದಿಯಲ್ಲೂ ನಡೆದಾಡಲೂ ಸಾದ್ಯವಾಗದ ಪುರಸಭೆಗೆ ಹಿಡಿಶಾಪ ಹಾಕುತ್ತಿರುವದು ಕಂಡು ಬಂತು.

ಭಟ್ಕಳ ತಾಲೂಕಿನಾದ್ಯಂದ ಬುಧುವಾರ ಬೆಳ್ಳಿಗ್ಗೆ ಯಿಂದ ಸುರಿಯುತ್ತಿರುವ ಗಾಳಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನರು ತೊಂದರೆ ಅನುಭವಿಸಿದ್ದಾರೆ..

ಹವಾಮಾನ ಇಲಾಖೆಯಿಂದ ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಅದರಂತೆ ಮಂಗಳವಾರ ಸಂಜೆಯಿAದ ಶುರುವಾದ ಮಳೆಗೆ ಜನರ ಜೀವನ ಆಸ್ವಸ್ಥಗೊಂಡಿದೆ. ತಾಲೂಕಿನ ಹೆಬಳೆ ಜಟಗೇಶ್ವರ ದೇವಸ್ಥಾನ ಸುತ್ತ ನೀರು ನಿಂತಿದು ನೀರಿನಿಂದ ಜಲಾವೃತಗೊಂಡಿದೆ. ಅದೇ ರೀತಿ ಮುರ್ಡೇಶ್ವರ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಳೆ ನೀರಿನಿಂದ ಸಂಪೂರ್ಣ ಜಾಲಾವೃತಗೊಂಡಿದೆ. ಭಟ್ಕಳದ ಸರ್ಕಲ್, ಹಾಗೂ ಹೆದ್ದಾರಿಯ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಯಿತು. ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಕೃತಕ ಕೆರೆ ಸೃಷ್ಟಿಯಾಗಿದೆ.

ಮಾವಳ್ಳಿ 1 ಗ್ರಾಮದ ಜನತಾ ಕಾಲೋನಿಯ ಅಂಗನವಾಡಿ ಕಟ್ಟಡದ ಮೇಲೆ ಬೆಳ್ಳಿಗ್ಗೆ 8 ಗಂಟೆಗೆ ಅಕೇಶಿಯ ಮರ ಬಿದ್ದು ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಹಂಚು ಮುರಿದು ಬಿದ್ದಿದ್ದು , ಗೋಡೆಯಲ್ಲಿ ಸ್ವಲ್ಪ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಈ ವೇಳೆ ಅಂಗನವಾಡಿ ಕೇಂದ್ರದಲ್ಲಿ ಯಾವುದೇ ಮಕ್ಕಳು ಇಲ್ಲದೆ ಇರುವುದರಿಂದ ಅನಾಹುತ ತಪ್ಪಿದಂತಾಗಿದೆ.

ಶಿರಾಲಿ 1 ಗ್ರಾಮದ ಗಣಪತಿ ನಾರಾಯಣ ದೇವಾಡಿಗ ಇವರ ವಾಸ್ತವ್ಯದ ಮನೆ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹೆಬಳೆ ಗ್ರಾಮದ ತೆಂಗಿನಗುಂಡಿ,ಹಿರೇಕೆರಿಯಲ್ಲಿ ಇಂದು ಮಳೆಯ ನೀರಿನ ಜೊತೆಗೆ ಸಮುದ್ರದ ನೀರು ಸಹ ಉಕ್ಕಿ ಸಾರ್ವಜನಿಕ ವಾಸ್ತವ್ಯ ಇರುವ ಪ್ರದೇಶಗಳಿಗೆ ನೀರು ನುಗ್ಗಿರುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ,ಹೆಬಳೆ ಗ್ರಾಮ ಪಂಚಾಯತ ಪಿಡಿಒ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದು.ಕೆಲವರ ಮನೆಯಂಚಿನವರೆಗೂ ನೀರು ತುಂಬಿದ್ದು. ಕೃಷಿ ಜಮೀನಿಗೂ ಕೂಡ ನೀರು ನುಗ್ಗಿದೆ.

ಕೊಪ್ಪ ಗ್ರಾಮದ ಹಿಂಡ ಸಮೀಪದವೆಂಕಟೇಶ ದುರ್ಗು ನಾಯ್ಕ ರವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ತೀವ್ರ ಹಾನಿಯಾಗಿದ್ದು, ಯಾವುದೇ ಜನ ಜಾನುವಾರು ಗಳಿಗೆ ಜೀವ ಹಾನಿಯಾಗಿಲ್ಲ. ಇವರ ವಾಸ್ತವ್ಯದ ಮನೆಗೆ ಕಳೆದ ಸಾಲಿನಲ್ಲಿ ಸಹ ಹಾನಿಯಾಗಿದ್ದು ಪರಿಹಾರ ನೀಡಲಾಗಿತ್ತು.

ಬೆಂಗ್ರೆ ಚಿಟ್ಟಿ ಹಕ್ಕಲನ ಗೊಯ್ದು ಈರಯ್ಯ ದೇವಾಡಿಗ ಮನೆಯ ಮೇಲೆ ಅಡಿಕೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ದುರ್ಗಮ್ಮ ನಾರಾಯಣ ದೇವಡಿಗ ಮಠದ ಮನೆ ಪಕ್ಕಾ ಮನೆಯ ಮೇಲ್ಛಾವಣಿ ಭಾಗಶಃ ಹಾನಿಯಾಗಿದೆ. ಪಾರ್ವತಿ ಸುಕ್ರಯ್ಯ ದೇವಡಿಗ ಮಠದ ಮನೆ ಪಕ್ಕಾಮನೆಯ ಮೇಲ್ಛಾವಣಿ ಹಂಚು ಹಾರಿಹೋಗಿ ಭಾಗಶ: ಹಾನಿಯಾಗಿದೆ. ಗಣಪತಿ ಸುಕ್ರಯ್ಯ ದೇವಡಿಗ ಬೊಗ್ರಿಜಡ್ಡು ವಾಸ್ತವ್ಯದ ಪಕ್ಕಾ ಮನೆಯ ಮೇಲ್ಚಾವಣಿಯ ಹಂಚು ಗಾಳಿಮಳೆಗೆ ಹಾರಿಹೋಗಿ ಭಾಗಶಃ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net