30 ವರ್ಷ ಬಳಿಕ ಉತಾರ ವಿತರಣೆ

Naragunda
ನರಗುಂದ ಬಸವೇಶ್ವರ ಬಡಾವಣೆ ನಿವಾಸಿಗಳಿಗೆ ಶಾಸಕ ಸಿ.ಸಿ.ಪಾಟೀಲ ಸೋಮವಾರ ಪುರಸಭೆಯಿಂದ ಇ-ಸ್ವತ್ತು ಉತಾರ ವಿತರಿಸಿದರು. ನೀಲವ್ವ ವಡ್ಡಿಗೇರಿ, ಚಂದ್ರಗೌಡ ಪಾಟೀಲ, ಅಪ್ಪಣಗೌಡ ನಾಯ್ಕರ, ಸುನೀಲ ಕುಷ್ಟಗಿ, ಸಂಗಮೇಶ ಬ್ಯಾಳಿ, ಇತರರಿದ್ದರು.
Published on

ನರಗುಂದ: ಕಳೆದ 30 ವರ್ಷಗಳಿಂದ ಹಕ್ಕುಪತ್ರ, ಉತಾರಗಳಿಲ್ಲದೆ ಪುರಸಭೆ ಕಚೇರಿಗೆ ಅಲೆಯುತ್ತಿದ್ದ ಪಟ್ಟಣದ ಶ್ರೀಬಸವೇಶ್ವರ ನಗರದ ನಿವಾಸಿಗಳಿಗೆ ಶಾಸಕ ಸಿ.ಸಿ. ಪಾಟೀಲ ಅವರು ಸೋಮವಾರ ಇ-ಸ್ವತ್ತು ಉತಾರ ವಿತರಿಸಿದರು.

ಬಳಿಕ ಮಾತನಾಡಿ, ಬಸವೇಶ್ವರ ನಗರದಲ್ಲಿ ಪುರಸಭೆಯ ಆಶ್ರಯ ಯೋಜನೆಯಡಿ 1995ರಲ್ಲಿ 20*30 ಅಳತೆಯ 265 ಮನೆ ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸಲಾಗಿತ್ತು. ಆದರೆ, ಕೆಲವರು ಹಣಕಾಸಿನ ಅಡಚಣೆಯಿಂದ ಆಶ್ರಯ ಮನೆಗಳನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರಿಂದ 55 ಕುಟುಂಬಗಳು ಉತಾರಗಳಿಲ್ಲದೆ ತೊಂದರೆಗೀಡಾಗಿದ್ದರು. ಈ ಕುರಿತು ನಿವಾಸಿಗಳು ಗಮನಕ್ಕೆ ತಂದ ತಕ್ಷಣವೇ ಹಕ್ಕುಪತ್ರ ಉತಾರ ವಿತರಿಸಲಾಗುತ್ತಿದೆ. 30 ವರ್ಷದ ಬಳಿಕ ಉತಾರ ನೀಡುತ್ತಿರುವುದರ ಬಗ್ಗೆ ವೈಯಕ್ತಿಕವಾಗಿ ಬೇಸರ ತರಿಸಿದೆ. ಇಲ್ಲಿನ ಜನರ ಬಹುದಿನದ ಬೇಡಿಕೆಯಾದ ಸಮುದಾಯ ಭವನ ಹಾಗೂ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಅಪ್ಪಣಗೌಡ ಪಾಟೀಲ, ಸುನೀಲ ಕುಷ್ಟಗಿ, ಭಾವನಾ ಪಾಟೀಲ, ಪ್ರಶಾಂತ ಜೋಶಿ, ದೇವಣ್ಣ ಕಲಾಲ, ಹಸನಸಾಬ ಗೋಟೂರ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಪ್ರಕಾಶ ಪಟ್ಟಣಶೆಟ್ಟಿ, ಈರಬಸಪ್ಪ ಹೂಗಾರ, ಸತ್ತಾರಸಾಬ ಮದ್ನೂರ, ಮಲ್ಲೇಶ ಬನ್ನಿಕೊಪ್ಪ, ಆರ್.ಪಿ.ಮಳೇಕರ, ರಾಜು ಈಟಿ, ಶಿವಾಜಿ ಡುರೇನವರ, ಸಿದ್ದು ಕಿಲಾರಿ, ಬಸವರಾಜ ಶಲವಡಿ, ಗಂಗಮ್ಮ ಗಡೇಕಾರ, ನಾಯ್ಕರ, ಇತರರಿದ್ದರು. ಆರ್.ಬಿ.ಚಿನಿವಾಲರ ನಿರ್ವಹಿಸಿದರು.

ಇ-ಸ್ವತ್ತು ಉತಾರಕ್ಕೆ ಪುರಸಭೆ ಸದಸ್ಯರು, ಅಧಿಕಾರಿಗಳು ಹಣ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಯಾರೊಬ್ಬರೂ ಹಣ ಕೊಡುವ ಅವಶ್ಯಕತೆ ಇಲ್ಲ. ಆಕಸ್ಮಾತ್ ಯಾರಾದರೂ ಹಣ ಕೇಳಿ ಪಡೆದುಕೊಂಡಿದ್ದರೆ ಅಂತಹವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆ ಮಾಡಿಸುತ್ತೇನೆ. ಪುರಸಭೆ ಅಧಿಕಾರಿಗಳು ಹಣ ಕೇಳುವುದರ ಬದಲಾಗಿ 30 ವರ್ಷದ ಬಳಿಕ ಇ-ಸ್ವತ್ತು ಉತಾರ ನೀಡುತ್ತಿರುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಿ.ಸಿ.ಪಾಟೀಲ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net