

ವಿಜಯಪುರ: ಇಲ್ಲಿನ ದಿವಟಗೇರಿ ಗಲ್ಲಿಯ ಶ್ರೀ ರಾವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಗುರು ರಾಯರ ಆರಾಧನಾ ಮಹೋತ್ಸವ ಮಂಗಳವಾರ ಉತ್ತಾರಾರಾಧನೆ ಮೂಲಕ ಸಂಪನ್ನಗೊಂಡಿತು.
ಬೆಳಗ್ಗೆ ಸುಪ್ರಭಾತ, ವಿವಿಧ ಅರ್ಚಕರ ನೇತೃತ್ವದಲ್ಲಿ ರಥಾಂಗ ಹವನ, ಶ್ರೀಹರಿ&ವಾಯುಸ್ತುತಿ ಪುನಶ್ಚರಣ, ಶ್ರೀಗುರುಸ್ತೋತ್ರ ಅಷ್ಟೋತ್ತರ ಶತ@ಪಠಣಪೂರ್ವಕ ಶ್ರೀಗುರುಸಾರ್ವಭೌಮರಿಗೆ 108 ಕಲಶದಿಂದ ವಿವಿಧ ಹಣ್ಣು ಹಂಪಲಗಳ ರಾಭಿಷೇಕ ಹಾಗೂ ಮಹಾಪಂಚಾಮೃತಾಭಿಷೇಕ ನೆರವೇರಿಸಲಾಯಿತು.
ನಂತರ ಶ್ರೀಮಠದ ಪ್ರಾಂಗಣದಲ್ಲಿ ಪಲ್ಲಕ್ಕಿ ಸೇವೆ ಜತೆಗೆ ವಿವಿಧ ಲಪುಷ್ಪಗಳಿಂದ ಅಲಂಕರಿಸಿದ ರಜತ ರಥೋತ್ಸವ ಸಂಭ್ರಮದಿಂದ ನಡೆಯಿತು. ವಿವಿಧ ಭಜನಾ ತಂಡಗಳು ಗುರು ರಾಯರ ಸ್ಮರಣೆಯ ಹಾಡುಗಳನ್ನು ಹಾಡಿದರು. ಬಡಾವಣೆಯ ಮಹಿಳೆಯರು ಸಾಂಪ್ರಾದಾಯಿಕ ಉಡುಗೆಯಲ್ಲಿ ಕೋಲಾಟವಾಡಿ ಗಮನಸೆಳೆದರು.
ಮಧ್ಯಾಹ್ನ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಮಂತ್ರಪುಷ್ಪ, ಸ್ವಸ್ತಿವಾಚನ, ಶ್ರೇಯ@ಪ್ರಾರ್ಥನೆ, ಬಳಿಕ ಮಹಾಪೂಜೆ, ನೈವೇದ್ಯ, ಗುರು ರಾಯರ ವೃಂದಾವನಕ್ಕೆ ಲ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ನಂತರ ಹಸ್ತೋದಕ, ಮಹಾಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಆರಾಧನಾ ಮಹೋತ್ಸವದ ಕೊನೇ ದಿನದ ಹಿನ್ನೆಲೆಯಲ್ಲಿ ಅಪಾರ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದರು. ಗಣ್ಯರಾದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನೂತನ ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ರಾಜು ಕುರಿಯವರ, ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ವಿಡಿಎ ಮಾಜಿ ಅಧ್ಯ ಭೀಮಾಶಂಕರ ಹದನೂರ, ಮುಖಂಡರಾದ ರಾಜೇಶ ದೇವಗಿರಿ, ಉಮೇಶ ವಂದಾಲ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದರು.
ಅರ್ಚಕರಾದ ಶ್ರೀನಿವಾಸ ಆಚಾರ ಗೋಠೆ, ಅಪ್ಪಣ್ಣಾಚಾರ ಗೊಠೆ, ಪ್ರಾಣೇಶ ಮಮದಾಪೂರ, ಶ್ರೀಮಠದ ಅಧ್ಯ ಶ್ರೀಹರಿ ಗೊಳಸಂಗಿ, ಶ್ರೀನಿವಾಸ ಬೆಟಗೇರಿ, ಅಪ್ಪಣ್ಣ ಗಾಯಿ, ವಿನಾಯಕ ಕುಲಕರ್ಣಿ, ಪ್ರಕಾಶ ಅಕ್ಕಲಕೋಟ, ನಾರಾಯಣ ಜೋಶಿ, ದತ್ತಾತ್ರೇಯ ಜೋಶಿ, ವಿಶಾಲ ಕುಲಕರ್ಣಿ, ಉಲ್ಲಾಸ ಕುಲಕರ್ಣಿ, ಅನಿಲ ಅಗ್ನಿಹೋತ್ರಿ ಮತ್ತಿತರರಿದ್ದರು.