ಸಹಾಯಕ್ಕಾಗಿ ಆರ್ಕೇಸ್ಟ್ರಾ ಕಲಾವಿದರ ಮನವಿ

VMS 4-4
Published on

ವಿಜಯಪುರ: ಲಾಕ್‌ಡೌನ್‌ದಿಂದ ತೊಂದರೆಗೀಡಾಗಿರುವ ಆರ್ಕೇಸ್ಟ್ರಾ ಕಲಾವಿದರಿಗೆ ತಿಂಗಳಿಗಾಗುವಷ್ಟು ಆಹಾರ ಕಿಟ್ ವಿತರಣೆ ಮಾಡುವಂತೆ ಉತ್ತರ ಕರ್ನಾಟಕ ಕಲಾವಿದರ ಕಲ್ಯಾಣ ವೇದಿಕೆ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, 60 ದಿನ ಲಾಕ್‌ಡೌನ್ ಆಗಿದ್ದರಿಂದ ಕಾರ್ಯಕ್ರಮಗಳಿಲ್ಲದೇ ಆರ್ಕೇಸ್ಟ್ರಾ ಕಲಾವಿದರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕಲಾವಿದರಿಗೆ ಕಲೆ ಬಿಟ್ಟು ಬೇರೆ ಯಾವುದೇ ಕೆಲಸ ಬರುವುದಿಲ್ಲ. ಈಗ ಕಲಾವಿದರ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಜಿಲ್ಲಾಧಿಕಾರಿಗಳು ಇವರ ಸಮಸ್ಯೆಗೆ ಸ್ಪಂದಿಸಿ, ಇವರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಆರ್ಕೇಸ್ಟ್ರಾ ಕಲಾವಿದರಿಗೂ ಧನಸಹಾಯ ಒದಗಿಸಬೇಕೆಂದು ವಿನಂತಿಸಿದರು.
ಕರವೇ ನಗರ ಅಧ್ಯಕ್ಷ ಯಾಜ್ ಕಲಾದಗಿ ಮಾತನಾಡಿದರು. ಪ್ರಶಾಂತ ಚೌಧರಿ, ಅನೀಲ ಚವಾಣ್, ಪ್ರಕಾಶ ಮಹೇಂದ್ರಕರ್, ರಮೇಶ ರತ್ನಾಕರ್, ಯಾಸೀನ್ ಜಿಗರ್, ಆನಂದ ಹೂಗಾರ, ಶ್ರೀನಿವಾಸ ಮಸೂತಿ, ಪರಸುರಾಮ ವಿಜಯಪುರ, ಶಿವಾನಂದ ಕಂಕಣವಾಗಿ, ಲಕ್ಷ್ಮಿ ಕೋರಿ, ರೇಖಾ ಹೂಗಾರ, ಮೈಬೂಬ್ ಅತ್ತಾರ್, ಭಾರತಿ ಕುಂದನಗಾರ, ಸುನೀಲ ಗುಡಗಂಟಿ, ಸಿದ್ದಾರ್ಥ ಬೈಚಬಾಳ, ರಾಜಶ್ರೀ ಮುಂಜಣ್ಣಿ, ಮಹಾಂತೇಶ ರೂಗಿ, ಸಾದೀಕ್ ಇನಾಮದಾರ್, ರಾಜೇಶ್ವರಿ ಶಕ್ತಿಕುಮಾರ, ಅಲ್ಲಾಭಕ್ಷ ದೇದಾರ್, ಅಮೀನ್ ಮೋಮಿನ್, ಯಾಸೀನ್ ಚೀರಲದ್ನಿ, ಶಿವಾನಂದ ಭಜಂತ್ರಿ, ಜುಬೇರ್ ಸುತಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net