ಕೋಟೆಕೇರಿ ಕ್ಷೇತ್ರದ ಉತ್ಸವಮೂರ್ತಿ ಸವಾರಿ

bmr-1
Published on

ಬ್ರಹ್ಮಾವರ: ಬಾರಕೂರು ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಉತ್ಸವಮೂರ್ತಿ ಪಲ್ಲಕಿ ಸವಾರಿಯು ಶುಕ್ರವಾರ ಮೂಡುಕೇರಿ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದು, ದೀಪಾಲಂಕೃತ ಕಲ್ಲುಚಪ್ಪರದಲ್ಲಿ ವಸಂತ ಪೂಜೆ ನೆರವೇರಿತು. ತಂತ್ರಿ ಕೃಷ್ಣ ಸೋಮಯಾಜಿ, ಅರ್ಚಕ ವೆಂಕಟರಣ ಭಟ್, ಗಣೇಶ್ ಭಟ್ ನಾಯರ್ ಬೆಟ್ಟು, ಮಂಜುನಾಥ ರಾವ್, ಬಾರಕೂರು ಶಾಂತಾರಾಮ ಶೆಟ್ಟಿ, ವಿಠಲ್‌ಹೆಗ್ಡೆ, ಸುಗ್ಗಿ ಸುಧಾಕರ ಶೆಟ್ಟಿ, ಆಕಾಶ್ ರಾಜ್ ಜೈನ್, ಉದಯ ಕುಮಾರ್ ಶೆಟ್ಟಿ, ಮಂಜಯ್ಯ ಹೆಗ್ಡೆ ಮತ್ತು ರಾಜಧಾನಿರಾಜ ಯೂತ್‌ಕ್ಲಬ್ ಸಹಿತ ವಿವಿಧ ಸಂಘ ಸಂಸ್ಥೆಗಳು, ಆಡಳಿತ ಸಮಿತಿ ಹಾಗೂ ಉತ್ಸವ ಸಮಿತಿ ಸದಸ್ಯರು ಇದ್ದರು. ಸಂಜೆ ರಥೋತ್ಸವನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net