ಶ್ರೀ ರಂಗನಾಥನಿಗೆ ಅಷ್ಟ ತೀರ್ಥೋತ್ಸವ

SRP_07-01(1)jpg
Published on

ಶ್ರೀರಂಗಪಟ್ಟಣ : ಐತಿಹಾಸಿಕ ಶ್ರೀರಂಗಪಟ್ಟಣದ ಶ್ರೀ ಆದಿ ರಂಗನಾಥಸ್ವಾಮಿಗೆ ತುಲಾ ಮಾಸದ ದಶಮಿ ಪ್ರಯುಕ್ತ ಅಷ್ಟ ತೀರ್ಥೋತ್ಸವ ನೆರವೇರಿಸಲಾಯಿತು.
ಪಟ್ಟಣದ ದೇವಾಲಯದಿಂದ ಮುಂಜಾನೆ 7ಕ್ಕೆ ದೇಗುಲದ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಶ್ರೀ ದೇವಿ, ಭೂದೇವಿ ಹಾಗೂ ಶ್ರೀ ರಂಗನಾಯಕಿ ಅಮ್ಮನವರ ಸಮೇತ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ವಿಶೇಷ ಪಲ್ಲಕ್ಕಿಯಲ್ಲಿ ಕೂರಿಸಿ ಜಿ.ಬಿ.ಹೊಳೆ, ಸ್ನಾನಘಟ್ಟ, ವಾಟರ್ ಗೇಟ್, ಚಂದ್ರವನ, ಬಂಗಾರದೊಡ್ಡಿ, ಪಶ್ಚಿಮವಾಹಿನಿ, ಗಂಜಾಂನ ನಿಮಿಷಾಂಬ ಹಾಗೂ ತ್ರಿವೇಣಿ ಸಂಗಮಕ್ಕೆ ಕರೆದೊಯ್ದು ಅಷ್ಟ ದಿಕ್ಕುಗಳಲ್ಲಿ ಹರಿವ ಕಾವೇರಿ ನದಿಯಲ್ಲಿ ತೀರ್ಥ ಸ್ನಾನ ನೆರವೇರಿಸಲಾಯಿತು. ಅಷ್ಟ ಋಷಿ ವರ್ಯರಿಗೆ ರಂಗನಾಥಸ್ವಾಮಿಯ ಪುಣ್ಯ ದರ್ಶನವನ್ನು ಮಾಡಿಸಲಾಯಿತು. ಈ ಸಂದರ್ಭ ವೇದಮಂತ್ರ ಹಾಗೂ ವಿಷ್ಣು ಸಹಸ್ರನಾಮ ಪಠಣೆ ಮಾಡಿದ ವೈದಿಕರು ಉತ್ಸವ ಮೂರ್ತಿಯೊಂದಿಗೆ ಪುಣ್ಯ ಸ್ನಾನ ನಡೆಸಿ ಧನ್ಯತೆ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net