ಉತ್ಸವ ಮೂರ್ತಿಗಳ ಮೆರವಣಿಗೆ ನಾಳೆ

aravind nagar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಶ್ರಾವಣ ಮಾಸದ ನಿಮಿತ್ತ ಹಳೇ ಹುಬ್ಬಳ್ಳಿ ಅರವಿಂದನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ಮೂರ್ತಿಗಳ ಮೆರವಣಿಗೆ ಆ. 31ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಹುಬ್ಬಳ್ಳಿ ಸವಿತಾ ಸಮಾಜದ ಅಧ್ಯಕ್ಷ ರಘುನಾಥ ನಾರಾಯಣದಾಸ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆರವಣಿಗೆಯು ದೇವಸ್ಥಾನದಿಂದ ಆರಂಭಗೊಂಡು ಕೆಎಚ್​ಬಿ ಕಾಲನಿ, ಚನ್ನಪೇಟ ಮುಖ್ಯ ರಸ್ತೆ, ಹಳೇ ಹುಬ್ಬಳ್ಳಿ ವೃತ್ತ, ಇಂಡಿಪಂಪ್, ಕಾರವಾರ ರಸ್ತೆ, ಅರವಿಂದ ನಗರ ಮುಖ್ಯ ರಸ್ತೆ ಮೂಲಕ ದೇವಸ್ಥಾನಕ್ಕೆ ಆಗಮಿಸಲಿದೆ. ಮೆರವಣಿಗೆಯಲ್ಲಿ ಸಕಲ ವಾದ್ಯ ವೃಂದಗಳು ಇರಲಿವೆ. ಶಾಸಕ ಮಹೇಶ ಟೆಂಗಿನಕಾಯಿ ಮೆರವಣಿಗೆಗೆ ಚಾಲನೆ ನೀಡುವರು. ಕೊಂಚೂರು ಶ್ರೀ ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಸವಿತಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಜಯ ಚೇಲೇರಿ, ಭೀಮಣ್ಣ ಚೇಲೇರಿ ಹಾಗೂ ಶ್ರೀನಿವಾಸ ಉಂದೇಕೋಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net