ದೇಶದ ನಾಲ್ಕು ಕಡೆ ಜಾಂಬೂರೇಟ್: ಸ್ಕೌಟ್ಸ್-ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾಹಿತಿ

23102022 bjp office
Published on

ಗಂಗಾವತಿ: ಸ್ವಾತಂತ್ರೃದ ಅಮೃತಮಹೋತ್ಸವ ನಿಮಿತ್ತ ರಾಜ್ಯದ ಮೂಡುಬಿದಿರೆ ಸೇರಿ ದೇಶದ ನಾಲ್ಕು ಕಡೆ ಜಾಂಬೂರೇಟ್ (ಸಮ್ಮೇಳನ)ಆಯೋಜಿಸುಲಾಗುತ್ತಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಕ್ಷತ್ರೀಯ ಸಮುದಾಯದಿಂದ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಡಿ.21ರಿಂದ 27ರವರೆಗೂ ಜರುಗಲಿರುವ ಜಾಂಬೂರೇಟ್‌ನಲ್ಲಿ 50 ಸಾವಿರ ವಿದ್ಯಾರ್ಥಿಗಳು ಮತ್ತು ತರಬೇತುದಾರರು ಭಾಗವಹಿಸಲಿದ್ದಾರೆ. ರಾಷ್ಟ್ರೀಯತೆ ಜತೆಗೆ ಶಿಸ್ತು ಮತ್ತು ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸರ್ಕಾರದ ಅನುದಾನ ಕಡಿಮೆ ಹಿನ್ನೆಲೆಯಲ್ಲಿ ಸಾರ್ವಜನಿಕರ ದೇಣಿಗೆಯಿಂದ ನಡೆಸಬೇಕಾಗಿದೆ. ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಉತ್ತಮ ಸ್ಪಂದನೆಯಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳು ಮತ್ತು ತರಬೇತುದಾರರು ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಜಿಲ್ಲಾ ಆಯುಕ್ತ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಮಾತನಾಡಿದರು. ಶಾಸಕ ಪರಣ್ಣ ಮುನವಳ್ಳಿ, ನಗರಸಭೆ ಸದಸ್ಯ ಶರಭೋಜಿರಾವ್ ಗಾಯಕ್ವಾಡ್, ನಯೋಪ್ರಾ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಸಮುದಾಯದ ಮುಖಂಡರಾದ ಕಾಶಿನಾಥ ಚಿತ್ರಗಾರ, ರಮೇಶ ಗೌಳಿ, ಮಂಜುನಾಥ, ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳಾದ ಮಲ್ಲೇಶ್ವರಿ, ಮೊಹಿನುದ್ದೀನ್, ಅರುಣಾ ವಸದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net