ಮೇ.4ಕ್ಕೆ ಉತ್ನಾಳ ಮಹಾಲಕ್ಷ್ಮಿ ಜಾತ್ರೆ, ಏ.23ರಿಂದ ಪುರಾಣ ಪ್ರವಚನ

utnala
Published on

ಬಾಗೇವಾಡಿ: ಉತ್ತರ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸುಕ್ಷೇತ್ರ ಉತ್ನಾಳ ಮಹಾಲಕ್ಷ್ಮಿ ದೇವಿಯ ವಾರ್ಷಿಕ ಜಾತ್ರೆಯ ಅಂಗವಾಗಿ ಬುಧವಾರ ಪುರಾಣ ಪ್ರವಚನ ಆರಂಭವಾಗಲಿದೆ ಎಂದು ಶ್ರೀಕ್ಷೇತ್ರದ ಕಾರ್ಯದರ್ಶಿ ಸಂಗಮೇಶ ಹಿರೇಮಠ ತಿಳಿಸಿದ್ದಾರೆ.

ಪ್ರತಿವರ್ಷ ವೈಶಾಖ ಮಾಸದ ಸಪ್ತಮಿಯಂದು ಮಹಾಲಕ್ಷ್ಮಿ ದೇವಿಯ ಜಾತ್ರೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು, 15 ದಿನಗಳ ಮುಂಚಿವಾಗಿಯೇ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಚಟುವಟಿಕೆಗಳು ಆರಂಭವಾಗಲಿವೆ. ಇಂದಿನಿಂದ ಮೇ.03ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ನವಲಗುಂದದ ಅಜಾತ ನಾಗಲಿಂಗ ಶರಣರ ಪುರಾಣ ಪ್ರವಚನ ನಡೆಯಲಿದೆ.ಮೇ.4ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಶ್ರೀಮಠದ ಶ್ರೀಶಿವಪುತ್ರಯ್ಯ ಸ್ವಾಮಿಗಳು ಹಾಗೂ ಮಾತೋಶ್ರೀ ಶಶಿಕಲಾ ಅಮ್ಮನವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ಏ.30ರಂದು ಬಸವ ಜಯಂತಿ, ಮೇ.2ರಂದು ಕೃಷಿಮೇಳ, ಮೇ.3ರಂದು ಶರಣ ಚಿಂತನಾ ಗೋಷ್ಠಿ ಮೇ.4ರಂದು ಸಾಮೂಹಿಕ ವಿವಾಹ, ಮುತ್ತೈದೆಯರಿಗೆ ಉಡಿ ತುಂಬುವುದು, ಮಹಾಲಕ್ಷ್ಮಿ ದೇವರಿಗೆ ಅಭಿಷೇಕ, ಹೋಮ, ಹವನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net