ಉಟಕನೂರು ಪೂಜ್ಯರ ಆದರ್ಶ ಮೈಗೂಡಿಸಿಕೊಳ್ಳಿ

Manv Sree
ಉಟಕನೂರು ಗ್ರಾಮದ ಅಡವಿ ಸಿದ್ಧೇಶ್ವರ ಮಠದಲ್ಲಿ ಶುಕ್ರವಾರ ಬಸವ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಒಳಬಳ್ಳಾರಿ ಸಿದ್ಧಲಿಂಗ ಶ್ರೀಗಳು ಉದ್ಘಾಟಿಸಿದರು. ಶ್ರೀಮಠದ ಪೀಠಾಧಿಪತಿ ಮರಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಮಹಾಂತ ಶ್ರೀಗಳು ಇತರರಿದ್ದರು.
Published on

ಮಾನ್ವಿ: ಒತ್ತಡದ ಬದುಕಿನಲ್ಲಿ ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಉಟಕನೂರು ಗ್ರಾಮದಲ್ಲಿ ಶುಕ್ರವಾರ ಅಡವಿ ಸಿದ್ಧೇಶ್ವರ ಮಠದ ಪೀಠಾಧಿಪತಿ ಮರಿಬಸವರಾಜ ದೇಶಿಕೇಂದ್ರ ಶ್ರೀಗಳ ಗುರುಪಟ್ಟಾಧಿಕಾರ, ಅಡವಿ ಸಿದ್ಧೇಶ್ವರರ ನೂತನ ಶಿಲಾಮಂದಿರ, ನೂತನ ರಥ ಲೋಕಾರ್ಪಣೆ ನಿಮಿತ್ತ ಆಯೋಜಿಸಿರುವ ಬಸವ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಟಕನೂರು ಪೂಜ್ಯರ (ಹಿರಿಯ ಶ್ರೀಗಳು) ಮಹಾತಪಸ್ವಿಗಳಾಗಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದ ಅವರು, ಪ್ರತಿಯೊಬ್ಬರೂ ಬಸವ ಪುರಾಣ ಕೇಳಲೇಬೇಕು. ಬಸವ ಬಸವ ಎಂದರೆ ಬಂದಂತಹ ಕಷ್ಟಗಳು ದೂರವಾಗುತ್ತವೆ. ಬಸವ ಪುರಾಣದ ಮೊದಲ ದಿನವೇ ಮಳೆ ಬಂದಿದೆ. ಇದು ಮಳೆಯಲ್ಲ ಪಾದೋದಕ ಎಂದರು.

ಶ್ರೀಮಠದ ಪೀಠಾಧಿಪತಿ ಮರಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕರೇಗುಡ್ಡ ಮಹಾಂತೇಶ್ವರ ಮಠದ ಮಹಾಂತ ಸ್ವಾಮೀಜಿ, ಮಸ್ಕಿ ಗಚ್ಚಿನಮಠದ ರುದ್ರಮುನಿ ಸ್ವಾಮೀಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net