

ಲೋಕಾಪುರ: ರಾಜ್ಯ ಸರ್ಕಾರಗಳ ವಿವಿಧ ಯೋಜನೆಯಡಿ ನೀಡುವ ಅನುದಾನವನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಪಟ್ಟಣದ ಠಾಣಿಕೇರಿ ಓಣಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜಾ ಸಮಾರಂಭಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೆಆರ್‌ಐಡಿಎಲ್ ಅನುದಾನದಡಿ ಅಂದಾಜು 20 ಲಕ್ಷ ರೂ.ಗಳ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಲಿದೆ. ಸ್ಥಳೀಯರ ಸಲಹೆ ಸೂಚನೆ ಪಡೆದು ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಶಿವಾನಂದ ಉದಪುಡಿ, ಯುವ ಮುಖಂಡ ಗುರುರಾಜ ಉದಪುಡಿ, ಸದುಗೌಡ ಪಾಟೀಲ, ಬೀರಪ್ಪ ಮಾಯನ್ನವರ, ಹೊಳಬಸು ದಂಡಿನ, ಮಹಾನಿಂಗಪ್ಪ ಹುಂಡೇಕಾರ, ಅಯ್ಯಪ್ಪಗೌಡ ಪಾಟೀಲ, ಮಂಜುಗೌಡ ಪಾಟೀಲ, ಗಣಪತಿ ಗಸ್ತಿ, ಮಹೇಶ ಪೂಜಾರಿ, ಲೋಕಣ್ಣ ಉಳ್ಳಾಗಡ್ಡಿ, ವಿಠ್ಠಲ ಆನೆಗುದ್ದಿ, ಮುತ್ತಪ್ಪ ಚೌಧರಿ, ಶಿವಪ್ಪ ರೊಡ್ಡಪ್ಪನವರ, ಯಮನಪ್ಪ ಕಾಳಮ್ಮನವರ, ಸಿದ್ದಪ್ಪ ಪರಸನ್ನವರ, ಮಹಾದೇವ ಹುಗ್ಗಿ, ಮರಿಗೆಪ್ಪ ಮುದಕವಿ, ಹಣಮಂತ ಪರಸನ್ನವರ, ಮರಿಗೆಪ್ಪ ಜುನ್ನಪ್ಪನವರ, ಅಬ್ದುಲ್ ರಹಿಮಾನ್ ತೊರಗಲ್ ಇತರರಿದ್ದರು.