ಬಾವುಟಗುಡ್ಡೆ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿರುವ ಕ್ಯಾಂಟೀನ್‌ನ ಹೊರಗಡೆ ಇರಿಸಿದ್ದ 24 ಸಾವಿರ ರೂ. ಮೌಲ್ಯದ ಪಾತ್ರೆ ಕಳವು

FIR-2
Published on

ಮಂಗಳೂರು: ನಗರದ ಬಾವುಟಗುಡ್ಡೆ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿರುವ ಕ್ಯಾಂಟೀನ್‌ನ ಹೊರಗಡೆ ಇರಿಸಿದ್ದ ಸುಮಾರು 24 ಸಾವಿರ ರೂ. ಮೌಲ್ಯದ ಅಲ್ಯುಮೀನಿಯಂ ಪಾತ್ರೆಗಳನ್ನು ಯಾರೋ ಕಳವು ಮಾಡಿದ್ದಾರೆ.

ಸುಜಿತ್ ಎಸ್. ನಾಯ್ಕ ಎನ್ನುವವರಿಗೆ ಸೇರಿದ ಕ್ಯಾಂಟೀನ್ ಆಗಿದ್ದು, ಅ.11ರಂದು ಮಧ್ಯಾಹ್ನ 3.30ಕ್ಕೆ ಕ್ಯಾಂಟೀನ್ ಅನ್ನು ಶುಚಿಗೊಳಿಸಿ ಕ್ಯಾಂಟೀನ್ ನಲ್ಲಿ ಉಪಯೋಗಿಸಿದ ಅಲ್ಯೂಮಿನಿಯಂ ಪಾತ್ರೆಗಳನ್ನು ಕ್ಯಾಂಟೀನ್ ಹೊರಗಡೆ ಆವರಣದಲ್ಲಿ ಇಟ್ಟಿದ್ದರು. ಅ.12ರಂದು ಭಾನುವಾರವಾಗಿದ್ದು, ಬೆಳಗ್ಗೆ 9 ಗಂಟೆಗೆ ಬಂದು 12 ಗಂಟೆಯ ವರೆಗೆ ಕ್ಯಾಂಟೀನಲ್ಲಿದ್ದರು. ಹೊರಗಡೆ ಇರಿಸಿದ್ದ ಪಾತ್ರಗಳು ಅಲ್ಲೇ ಇದ್ದವು. ಮನೆಗೆ ಹೋಗಿ ಮಧ್ಯಾಹ್ನ 3 ಗಂಟೆಯ ಸಮಯಕ್ಕೆ ವಾಪಾಸ್ಸು ಬಂದು ನೋಡಿದಾಗ ಹೊರಗಡೆ ಇರಿಸಿದ್ದ ಅಲ್ಯೂಮಿನಿಯಂ ಪಾತ್ರೆಗಳು ಕಣ್ಮರೆಯಾಗಿತ್ತು.

ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರಬಹುದು ಎಂದು ಅನುಮಾನವಿದ್ದು, ಪಾತ್ರಗಳ ಅಂದಾಜು ಮೌಲ್ಯ 24 ಸಾವಿರ ರೂ. ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net