ಸಾಂಬಾರು ಪಾತ್ರೆಗೆ ಬಿದ್ದು ಮಗು ಸಾವು

Child
Published on

ಹೊಳೆಹೊನ್ನೂರು: ಸಾಂಬಾರು ಪಾತ್ರೆಗೆ ಎಡವಿ ಬಿದ್ದು ಗಾಯಗೊಂಡಿದ್ದ ಎರಡು ವರ್ಷದ ಮಗು ಮೃತಪಟ್ಟಿದೆ. ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ ಹರೀಶ್ ಹಾಗೂ ಮಾನಸ ದಂಪತಿಯ ಪುತ್ರ ಹರ್ಷಿತ್(2) ಮೃತ ದುರ್ದೈವಿ.

ಕಳೆದ ವಾರ ದಾವಣಗೆರೆ ಜಿಲ್ಲೆಯ ಬನ್ನಿಕೋಡು ಗ್ರಾಮದಲ್ಲಿ ಏರ್ಪಡಿಸಿದ್ದ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಊಟ ಮಾಡುವಾಗ ಅಲ್ಲೇ ಇದ್ದ ಸಾಂಬಾರಿನ ಪಾತ್ರೆಗೆ ಎಡವಿ ಬಿದ್ದು ಮಗು ಗಾಯಗೊಂಡಿತ್ತು. ಮಗುವನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸಲಿಲ್ಲ.

ಎಮ್ಮೆಹಟ್ಟಿಯಲ್ಲಿ ಶನಿವಾರ ಮಗುವಿನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಮಗುವಿನ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net