

ಪುತ್ತೂರು: ಉಷಾ ಮೆಡಿಕಲ್ಸ್ ಮಾಲೀಕರ ಸೇವಾ ದಕ್ಷತೆ, ನಗುಮೊಗದ ಸೇವೆಯಿಂದ ಸಂಸ್ಥೆ ಸುದೀರ್ಘ ೨೮ ವರ್ಷದ ಪಯಣವನ್ನು ಕಂಡಿದೆ. ನಾಲ್ಕನೇ ಶಾಖೆಯನ್ನು ತೆರೆಯುತ್ತಿರುವುದು ಉತ್ತಮ ಬೆಳವಣಿಗೆಗೆ ಕಾರಣ ಎಂದು ಕೆಮ್ಮಿಂಜೆ ನಾಗೇಶ್ ತಂತ್ರಿ ಹೇಳಿದರು.
ಬೊಳುವಾರು ಹಿರಣ್ಯ ಕಾಂಪ್ಲೆಕ್ಸ್‌ನಲ್ಲಿ ಔಷಧ ಮಾರಾಟ ಸೇವೆಯಲ್ಲಿ ಕಳೆದ ೨೮ ವರ್ಷಗಳಿಂದ ತೊಡಗಿರುವ, ದರ್ಬೆ ಶ್ರೀರಾಮ ಸೌಧದಲ್ಲಿ ಮುಖ್ಯ ಶಾಖೆ ಹೊಂದಿರುವ ಉಷಾ ಮೆಡಿಕಲ್ಸ್‌ನ ನಾಲ್ಕನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಾವೀರ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ಸುರೇಶ್ ಕೆ.ಪುತ್ತೂರಾಯ ಮಾತನಾಡಿ, ಉಷಾ ಮೆಡಿಕಲ್ಸ್ ಪುತ್ತೂರಿನ ನಂ.೧ ಮೆಡಿಕಲ್ ಆಗಿದ್ದು, ಇಲ್ಲಿ ಎಲ್ಲ ರೀತಿಯ ಔಷಧಗಳು ಲಭ್ಯವಿವೆ. ಸಂಸ್ಥೆಯ ಸೇವಾ ಕಾರ್ಯದಿಂದ ಏಳಿಗೆ ಕಾಣುವಂತಾಗಿದೆ ಎಂದರು.
ಮೆಡಿಕಲ್ ಕಟ್ಟಡ ಉದ್ಘಾಟಿಸಿ ಮಾತನಾಡಿದ ಪ್ರಗತಿ ಹಾಸ್ಪಟಲ್‌ನ ಹೃದ್ರೋಗ ತಜ್ಞ ಡಾ.ಶ್ರೀಪತಿ ರಾವ್, ಕ್ಲಿನಿಕಲ್ ಮೆಡಿಕಲ್ ಕಲಿಸುವ ಶಿಕ್ಷಕರು ಕಡಿಮೆಯಾಗಿದ್ದಾರೆ. ಈ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ಕ್ಲಿನಿಕಲ್ ಮೆಡಿಸಿನ್ ಉಳಿಸುವ ಕಾರ್ಯ ನಡೆಯಬೇಕಿದೆ ಎಂದರು.
ಮಾಯಿದೆ ದೇವುಸ್ ಚರ್ಚ್ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್, ಮಾಡನ್ನೂರು ಜುಮಾ ಮಸೀದಿ ಖತೀಬ ಎಸ್.ವಿ.ಮೊಹಮ್ಮದ್ ದಾರಿಮಿ ಉಪ್ಪಿನಂಗಡಿ ಮಾತನಾಡಿದರು. ಕಟ್ಟಡ ಮಾಲಕಿ ವಜ್ರೇಶ್ವರಿ ಜಿ.ಭಟ್ ಹಿರಣ್ಯ, ಕರ್ನಾಟಕ ರಾಜ್ಯ ಕೆಮಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಸದಸ್ಯ ಡಿ.ಐ.ಪುರುಷೋತ್ತಮ್, ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ವರ್ಷಲಕ್ಷ್ಮೀ ಪ್ರಾರ್ಥಿಸಿದರು. ಪುತ್ತೂರು ಉಮೇಶ್ ನಾಯಕ್ ಸ್ವಾಗತಿಸಿದರು. ಉಷಾ ಮೆಡಿಕಲ್ಸ್ ಮಾಲೀಕ ಪಿ.ಗಣೇಶ್ ಭಟ್ ವಂದಿಸಿದರು.