ರೋಟರಿ ಕ್ಲಬ್ ಸಹಾಯ ಸದ್ಬಳಕೆಯಾಗಲಿ

IMG20240831203536.jpg
Published on

ಬೆಳಗಾವಿ: ರೋಟರಿ ಕ್ಲಬ್ ಆಫ್ ಬೆಳಗಾವಿ ದಕ್ಷಿಣ ಶನಿವಾರ ಶಹಾಪುರದ ದಾನಮ್ಮದೇವಿ ಮಂಗಲ ಕಾರ್ಯಾಲಯದಲ್ಲಿ ಕರೊನಾಪೀಡಿತ ಕುಟುಂಬಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಶಿಕ್ಷಣ ಬೆಂಬಲಿಸುವ ‘ಶಿಕ್ಷಣ ಕಾ ಸಹಾರಾ’ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.

ಅತಿಥಿಯಾಗಿ ಆಗಮಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಬಿ.ಇ. ರಂಗಸ್ವಾಮಿ ಮಾತನಾಡಿ, ಶಿಕ್ಷಣಕ್ಕೆ ಒತ್ತುಕೊಟ್ಟಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಅಂತಹ ಶಿಕ್ಷಣಕ್ಕೆ ಸಹಾಯ ಮಾಡುತ್ತಿರುವ ರೋಟರಿ ಕ್ಲಬ್ ಸೇವೆ ಅಭಿನಂದಾರ್ಹ. ಇವರು ನೀಡಿದ ಸಾಮಗ್ರಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಸುಜಾತಾ ಬಾಳೇಕುಂದ್ರಿ ಮಾತನಾಡಿ, ಅಸಹಾಯಕರಿಗೆ ಯಾರಾದರೂ ಸಹಾಯ ಮಾಡುತ್ತಾರೆ. ಅಸಹಾಯಕತೆಯಿಂದ ತೊಂದರೆಗಳಾದ ಕುಟುಂಬಗಳ ಮಕ್ಕಳಿಗೆ ನೈತಿಕ ಸ್ಥೈರ್ಯ ತುಂಬಲು ಇಂತಹ ಸಹಾಯ ಶ್ಲಾಘನೀಯ ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಭೂಷಣ್ ಮೊಹಿರೆ, ರೋಟರಿಯ ಕಿರಣ ಕುಲಕರ್ಣಿ, ರಾಜಶ್ರೀ ಮಿಸಾಳೆ, ಆರ್.ಬಿ. ಸೊಗಲಿ, ಪ್ರಣವ್ ಪಿತ್ರೆ ಇತರರಿದ್ದರು. ಗೌರಿ ರಾಮಗುರವಾಡಿ ಹಾಗೂ ಇವೆಂಟ್ ಕೋ ಆರ್ಡಿನೇಟರ್ ಗೋವಿಂದ ಮಿಸಾಳೆ ಪರಿಚಯಿಸಿದರು. ಇವೆಂಟ್ ಚೇರ್ಮನ್ ರಮೇಶ ರಾಮಗುರವಾಡಿ ಪ್ರಾಸ್ತಾವಿಕ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ರೋಟರಿಯನ್ ನೀಲೇಶ್ ಪಾಟೀಲ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net