ಗುಣಮಟ್ಟದ ಬೀಜ ಬಳಸಿ ಉತ್ತಮ ಇಳುವರಿ ಪಡೆಯಿರಿ

28 Jaggu 7
Published on

ಬೆಳಗಾವಿ: ಗುಣಮಟ್ಟದ ಬಿತ್ತನೆ ಬೀಜ ಬಳಸಿ ರೈತ ಉತ್ತಮ ಇಳುವರಿ ಹಾಗೂ ಲಾಭ ಪಡೆಯಬೇಕು ಎಂದು ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಬೀಜ ಮೇಳದಲ್ಲಿ ಅವರು ಮಾತನಾಡಿ, ಪ್ರಸ್ತುತ ಕೃಷಿ ವ್ಯವಸ್ಥೆಯಲ್ಲಿ ಗುಣಮಟ್ಟದ ಬೀಜಗಳ ಲಭ್ಯತೆ ಇಲ್ಲದ ಕಾರಣ ವ್ಯವಸಾಯದಲ್ಲಿ ಕಡಿಮೆ ಇಳುವರಿ ಬರುತ್ತಿದೆ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸುವುದಕ್ಕೆ ಕೃಷಿ ವಿಜ್ಞಾನ ಕೇಂದ್ರದಿಂದ ಬೀಜ ಮೇಳ ಆಯೋಜಿಸಲಾಗಿದೆ. ರೈತರಿಗೆ ಗುಣಮಟ್ಟದ ಬೀಜ ವಿತರಣೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಮುಂಚೂಣಿಯಲ್ಲಿದೆ ಎಂದರು.

ಮಣ್ಣು ವಿಜ್ಞಾನಿ ಎಸ್​.ಎಂ.ವಾರದ ಮಣ್ಣು ಪರೀೆ ಮಹತ್ವ ಹಾಗೂ ಬೇಳೆ, ಎಣ್ಣೆ ಕಾಳು ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಕುರಿತು ವಿವರಿಸಿದರು. ಬೇಸಾಯಶಾಸ ವಿಜ್ಞಾನಿ ಜಿ.ಬಿ.ವಿಶ್ವನಾಥ ಸೋಯಾ ಅವರೆ, ತೊಗರಿ, ಹೆಸರು ಹಾಗೂ ಉದ್ದು ತಳಿ, ಲಕ್ಷಣಗಳು ಹಾಗೂ ಬೇಸಾಯ ಪದ್ಧತಿಗಳ ಬಗ್ಗೆ ಮಾತನಾಡಿದರು. ತೋಟಗಾರಿಕೆ ವಿಜ್ಞಾನಿ ಪ್ರವಿಣ ಯಡಹಳ್ಳಿ ಹಣ್ಣು ಮತ್ತು ತರಕಾರಿ ಬೆಳೆಗಳ ಕುರಿತು ಮಾಹಿತಿ ನೀಡಿದರು. ಶಂಕರಗೌಡ ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ವಿನೋದ ಕೋಚಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net