ಶುದ್ಧ ಎಣ್ಣೆ ಪದಾರ್ಥಗಳನ್ನು ಬಳಸಿ

Harapanahalli health
ಹರಪನಹಳ್ಳಿಯಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಆರೋಗ್ಯ ಮುಂಜಾಗ್ರತಾ ಮಾಹಿತಿ ಕಾರ್ಯಾಗಾರ ಉದ್ಘಾಟನೆ ಸಂದರ್ಭ ಆರೋಗ್ಯ ತಜ್ಞರಾದ ರತ್ನಾಕರ್ ಶೆಟ್ಟಿ, ನಾಗರಾಜ್, ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಹೊನ್ನೂರಪ್ಪ, ನಿಕಟಪೂರ್ವ ಕಸಾಪ ತಾಲೂಕಾಧ್ಯಕ್ಷ ರಾಮನಮಲಿ, ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ ಇತರರಿದ್ದರು.
Published on

ಹರಪನಹಳ್ಳಿ: ಪ್ರಸ್ತುತ ಕೃಷಿಯಲ್ಲಿ ಅತಿಹೆಚ್ಚು ರಾಸಾಯನಿಕ ಬಳಕೆ ಮಾಡುತ್ತಿರುವುದರಿಂದ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಗ್ಯ ತಜ್ಞ ರತ್ನಾಕರ್ ಶೆಟ್ಟಿ ತಿಳಿಸಿದರು.

ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಶಿಕ್ಷಣ ಇಲಾಖೆ ನಿವೃತ್ತ ಸಂಘದ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ಫುಟ್ ಥೆರಪಿ ಹಾಗೂ ಆರೋಗ್ಯ ಮುಂಜಾಗ್ರತಾ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಪೂರ್ವಜರು ನೈಸರ್ಗಿಕವಾಗಿ ಬೆಳೆದ ಬೆಳೆಗಳನ್ನು ಬಳಸುತ್ತಿದ್ದರು. ಹೀಗಾಗಿ ಅವರು ಆಸ್ಪತ್ರೆಗಳಿಗೆ ಹೋಗುವುದು ವಿರಳವಾಗಿತ್ತು. ಇಂದು ನಾವು ಸೇವಿಸುವ ಆಹಾರದಲ್ಲಿ ಯಾವುದೇ ಸತ್ವಗಳಿಲ್ಲ. ಶುದ್ಧ ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡಿದರೆ ಮಂಡಿ ನೋವು, ವಾಯದಂಥ ರೋಗಗಳು ಬರುವುದಿಲ್ಲ ಎಂದರು.

ಆರೋಗ್ಯ ಕುರಿತಾಗಿ ತಜ್ಞ ನಾಗರಾಜ್ ಮತನಾಡಿದರು. ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಹೊನ್ನೂರಪ್ಪ, ನಿಕಟಪೂರ್ವ ಕಸಾಪ ತಾಲೂಕಾಧ್ಯಕ್ಷ ರಾಮನಮಲಿ, ದೈಹಿಕ ಶಿಕ್ಷಣ ಪರಿವೀಕ್ಷಕ ಕೆ ಷಣ್ಮುಖಪ್ಪ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್, ರಾಮಮೂರ್ತಿ, ಆರ್.ಎಂ.ಶಿವಯೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net