ಸರಿಯಾದ ಸಮಯಕ್ಕೆ ಕಳೆನಾಶಕ ಬಳಸಿ

gvt
ಗಂಗಾವತಿ ತಾಲೂಕಿನ ಹಣವಾಳದ ಭತ್ತದ ಗದ್ದೆಯಲ್ಲಿ ಕೃಷಿ ವಿಜ್ಞಾನಕೇಂದ್ರ, ಕೃಷಿ ಇಲಾಖೆ ಸಹಯೋಗದೊಂದಿಗೆ ಭತ್ತದಲ್ಲಿ ಡ್ರಮ್ ಸೀಡರ್ ಬಿತ್ತನೆ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ಶನಿವಾರ ಜರುಗಿತು. ಹಿರಿಯ ತಾಂತ್ರಿಕ ಅಧಿಕಾರಿ ಜಿ.ನಾರಪ್ಪ, ಕೃಷಿ ಅಧಿಕಾರಿ ಎಸ್.ಆಶೋಕ ಇತರರಿದ್ದರು.
Published on

ಗಂಗಾವತಿ: ವೆಚ್ಚ ಕಡಿತಕ್ಕೆ ಸುಧಾರಿತ ತಂತ್ರಜ್ಞಾನ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕಿದ್ದು, ಹೆಚ್ಚುವರಿ ಇಳುವರಿ ಪಡೆಯುವಂತೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಜಿ.ನಾರಪ್ಪ ಹೇಳಿದರು.


ತಾಲೂಕಿನ ಹಣವಾಳದ ಭತ್ತದ ಗದ್ದೆಯಲ್ಲಿ ಕೃಷಿ ವಿಜ್ಞಾನಕೇಂದ್ರ, ಕೃಷಿ ಇಲಾಖೆ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಭತ್ತದಲ್ಲಿ ಡ್ರಮ್ ಸೀಡರ್ ಬಿತ್ತನೆ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.


ಡ್ರಮ್ ಸೀಡರ್‌ನಿಂದ ಭತ್ತದ ಬಿತ್ತನೆಯಿಂದ ಸಸಿ ಮಡಿಗೆ ಮತ್ತು ನಾಟಿ ಮಾಡುವುದಕ್ಕೆ ತಗುಲುವ ಖರ್ಚನ್ನು ಉಳಿಸಬಹುದಾಗಿದೆ. ಎಕರೆಗೆ 8 ರಿಂದ 10 ಕೆಜಿ ಬಿತ್ತನೆ ಸಾಕಾಗುವುದು. ನಾಟಿ ಮಾಡಿದ ಬೆಳೆಗಿಂತ ಬೇಗನೆ ಕಟಾವಿಗೆ ಬರಲಿದೆ ಎಂದರು.


ಮರಳಿ ರೈತ ಸಂಪರ್ಕ ಕೇಂದ್ರದ ಕಷಿ ಅಧಿಕಾರಿ ಎಸ್.ಅಶೋಕ ಮಾತನಾಡಿ, ಡ್ರಮ್ ಸೀಡರ್ ಬಿತ್ತನೆಯಲ್ಲಿ ಕಳೆನಾಶಕಗಳ ಬಳಕೆ ಮುಖ್ಯವಾಗಿದ್ದು, ಸರಿಯಾದ ಸಮಯದಲ್ಲಿ ಕಳೆನಾಶಕ ಬಳಸುವುದರಿಂದ ಕಳೆ ನಿಯಂತ್ರಿಸಬಹುದಾಗಿದೆ ಎಂದರು. ಕೃಷಿ ಇಲಾಖೆಯಲ್ಲಿ ರೈತರಿಗೆ ಮೀಸಲಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.


ಪ್ರಾತ್ಯಕ್ಷಿಕೆ ಕುರಿತು ಕೆವಿಕೆ ಗೃಹ ತಜ್ಞೆ ಡಾ.ಕವಿತಾ ಉಳ್ಳಿಕಾಶಿ ಪ್ರಾಸ್ತಾವಿಕ ಮಾತನಾಡಿದರು. ತಜ್ಞೆ ಜೆ.ರಾಧಾ, ಪ್ರಗತಿಪರ ರೈತರಾದ ವೀರೇಶಪ್ಪ ಹಣವಾಳ, ವಿ.ಸತ್ಯನಾರಾಯಣ, ರಾಮರಾಜು ವಿವಿಧ ಗ್ರಾಮದ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net