

ಸಂಡೂರು: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳೇ ಪ್ರಥಮ ಸ್ಥಾನದಲ್ಲಿರುತ್ತಾರೆ. ಆದರೆ, ಗರ್ಭದಲ್ಲಿರುವಾಗಲೇ ಹೆಣ್ಣೇಂದು ತಿಳಿದರೆ ಗರ್ಭಪಾತ ಮಾಡಿಸುತ್ತಾರೆ ಎಂದು ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ಪಿಲಿಕುಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ತಾಲೂಕಿನ ಕೃಷ್ಣಾನಗರದ ಬಳಿ ಶಾಸಕರ ಭವನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ 25 ಗರ್ಭೀಣಿಯರಿಗೆ ಹಾಗೂ 150 ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಂದ್ರನ ಮೇಲಿದ್ದ ಸುನಿತಾ ವಿಲಿಮ್ಸ್ 9 ತಿಂಗಳ ನಂತರ ಭೂಮಿಗಿಳಿದರು. ಮಕ್ಕಳಾಗಲಿಲ್ಲ ಎಂದು ಸಾಲು ಮರದ ತಿಮ್ಮಕ್ಕ ಮರಗಳನ್ನೇ ಮಕ್ಕಳೆಂದು ಬೆಳೆಸಿದರು. ಗರ್ಭೀಣಿಯರು ಬಿಪಿ, ಶುಗರ್, ಸೊಂಟ ನೋವು ಎಂದು ಡಾಕ್ಟರ್ ಬಳಿ ಹೋಗದೆ 9 ತಿಂಗಳು ಮನೆ ಕೆಲಸ, ಹೊಲದ ಕೆಲಸದಲ್ಲಿ ದಿನಗಳನ್ನು ಕಳೆದರೆ ನಾರ್ಮಲ್ ಡೆಲಿವರಿ ಆಗುತ್ತದೆ. ಹಿಂದಿನ ಕಾಲದ ಆಹಾರ ಪದ್ಧತಿ ಬಳಸಿ ಎಂದರು.
ಶಾಸಕಿ ಅನ್ನಪೂರ್ಣಾ ತುಕಾರಾಮ್ ಮಾತನಾಡಿ, ಹೆಣ್ಣು ಮಕ್ಕಳಿಗೆ ತಾರತಮ್ಯ ಮಾಡುತ್ತಾರೆ. ಸ್ತ್ರೀ ಎಂದರೆ ಎಷ್ಟೊಂದು ಫಲಕಗಳು, ಆಯಾಮಗಳು, ವೇಷ ಭೂಷಣಗಳು, ಅವಳು ಆಕಾಶ, ಭೂಮಿ, ನಭೋ ಮಂಡಲ, ಅವಳ ಆತ್ಮ ಎಷ್ಟೊ ಅಮರ ಗೀತೆಗಳನ್ನು ಕೊಟ್ಟಿದೆ. ಈ ಜಗತ್ತು ಮೊಗೆ ಮೊಗೆದು ಕುಡಿದರೂ ಇಂಗಲಾರದ ಭಾವಿಯಂತೆ ಬದುಕಿದ್ದಾಳೆ. ಹೆಣ್ಣೆಂದರೆ ಪ್ರಕೃತಿ ಚಿಗುರಿ ಚಿಗುರಿಸುವವಳು. ತಿಂಗಳಿಗೆ ಒಮ್ಮೆ ಮಹಿಳೆಯರ ಕಷ್ಟ, ಸುಖ ಕೇಳಲು ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಎಸ್ಪಿ ಶೋಭಾರಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ವಿಜಯಕುಮಾರ್, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕಿ ರೇಣುಕಾ ಪೂಜಾರ್, ಪುರಸಭೆ ಉಪಾಧ್ಯಕ್ಷೆ ಲತಾ ಉಜ್ಜಪ್ಪ, ತಾಪಂ ಎಡಿಎ ಕೆ.ಎಸ್.ಮಹೇಶ್ ಕುಮಾರ್, ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ಉಪಾಧ್ಯಕ್ಷೆ ಪುಷ್ಪಾ ಬೊಮ್ಮಘಟ್ಟ, ಮಾಜಿ ಜಿಪಂ ಸದಸ್ಯೆ ನೇತ್ರಾವತಿ ಕರಿಬಸಪ್ಪ, ವಕೀಲೆ ರೇಖಾ ಶಿವಕುಮಾರ್, ಪ್ರಮುಖರಾದ ಈರಮ್ಮ, ಚೇತನಾ ತುಕಾರಾಮ್ ಇತರರಿದ್ದರು.