

ಸುಳ್ಯ: ಲೋಕಾಯುಕ್ತ ಎ.ಡಿ.ಜಿ.ಪಿ.ಚಂದ್ರಶೇಖರ್ ಅವರು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದನ್ನು ಸುಳ್ಯ ಜೆಡಿಎಸ್ ಖಂಡಿಸಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಪೊಲೀಸ್ ಇಲಾಖೆ ಉನ್ನತ ಹುದ್ದೆಯಲ್ಲಿ ಇದ್ದುಕೊಂಡು ದುರುದ್ದೇಶದಿಂದ ಕೇಂದ್ರ ಸಚಿವರನ್ನು ಅವಮಾನಗೊಳಿಸಿರುವುದು ಸರಿಯಲ್ಲ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಜನತಾದಳದ ಪದಾಧಿಕಾರಿಗಳು ಆಗ್ರಹಿಸಿ ಸುಳ್ಯ ತಹಸೀಲ್ದಾರ್ ಅರವಿಂದ ಕೆ.ಎಂ. ಅವರಿಗೆ ಮನವಿ ಸಲ್ಲಿಸಿದರು.
ಸುಳ್ಯ ತಾಲೂಕು ಜನತಾದಳ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಉಪಾಧ್ಯಕ್ಷರುಗಳಾದ ದೇವರಾಮ ಬಾಳೆಕಜೆ, ರೋಹನ್ ಪೀಟರ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಧ್ಯಕ್ಷ ಎಂ.ಬಿ.ಚೋಮ, ರಾಮಚಂದ್ರ ಬಳ್ಳಡ್ಕ ಮೊದಲಾದವರು ಇದ್ದರು.