ಅವಾಚ್ಯ ಭಾಷೆ ಬಳಕೆ ಕಾಂಗ್ರೆಸ್ ಸಂಸ್ಕೃತಿ

new JOSHI NEW NEW
Published on

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಅವಾಚ್ಯವಾಗಿ, ಅಸಭ್ಯವಾಗಿ ನಿಂದಿಸಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಯಾದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭಯವದಲ್ಲಿ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸುಳ್ಳು ಕೇಸ್ ಹಾಕಿತ್ತು. ಎಲ್ಲವೂ ತಿರಸ್ಕೃತಗೊಂಡಿವೆ ಹಾಗೂ ದೋಷಮುಕ್ತರಾಗಿದ್ದಾರೆ ಎಂದರು.
ನಲಪಾಡ್‌ನಂಥವರನ್ನು ಪಕ್ಷದಲ್ಲಿಟ್ಟುಕೊಂಡಿರುವ ಇವರು, ಗುಂಡಾಗರ್ದಿ ಬಗ್ಗೆ ಮಾತನಾಡುತ್ತಿದ್ದಾರೆ. ದೇಶ ಕಂಡ ಅತ್ಯಂತ ದಕ್ಷ ಗೃಹ ಮಂತ್ರಿ ಅಮಿತ್‌ಶಾ. ಅವರ ಬಗೆಗೆ ಮಾತನಾಡಿರೋದು ಅವರ ನಾಲಿಗೆಯ ಸಂಸ್ಕೃತಿ ತೋರಿಸುತ್ತದೆ. ಕಾಂಗ್ರೆಸ್‌ನವರು ಸಂವಿಧಾನಕ್ಕೆ ಯಾವತ್ತೂ ಗೌರವ ಕೊಟ್ಟಿಲ್ಲ. ಸಂವಿಧಾನದ ಕತ್ತು ಹಿಸುಕಿದರು. ನಾವು ಸಂವಿಧಾನದ ದಿನಾಚರಣೆ ಜಾರಿಗೆ ತಂದಿದ್ದೇವೆ. ಆದರೆ, ಕಾಂಗ್ರೆಸ್‌ನವರು ಸಂವಿಧಾನ ಬದಲಾವಣೆಯ ಅಪಪ್ರಚಾರ ಮಾಡುತ್ತಿದ್ದಾರೆ. ಕೆಟ್ಟ ಭಾಷೆ ಬಳಸುವುದು ಸೋಲಿನ ಹತಾಶೆಯ ಪ್ರತೀಕ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net