ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಳಸಿ

kle tech
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಆಧುನಿಕ ಕೃಷಿ ಪದ್ಧತಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ತಂತ್ರಜ್ಞಾನವನ್ನು ಬಳಸುವ ಅಗತ್ಯತೆ ಇದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ ಹೇಳಿದರು.

ಧಾರವಾಡ ಕೃಷಿ ವಿವಿಯಲ್ಲಿ ಇತ್ತೀಚೆಗೆ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಜತೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಕೆಎಲ್​ಇ ತಾಂತ್ರಿಕ ವಿವಿ ಕಾರ್ಯನಿರ್ವಾಹಕ ಡೀನ್ ಪ್ರೊ. ಬಿ.ಎಲ್. ದೇಸಾಯಿ, ಹೊಸ ತಂತ್ರಜ್ಞಾನಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸಬೇಕು ಹಾಗೂ ವೆಚ್ಚವನ್ನು ಕಡಿಮೆ ಮಾಡಬೇಕು. ರೈತ ಸಮುದಾಯಕ್ಕೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಲ್ಲಿ ನಾವು ಕೃಷಿ ವಿವಿ ಜತೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.

ವಿವಿಯ ವಿಶ್ರಾಂತ ಡೀನ್ ಡಾ. ವಿ.ಸಿ. ಪಾಟೀಲ, ರಿಮೋಟ್ ಸೆನ್ಸಿಂಗ್, ರೋಬಾಟಿಕ್ಸ್, ಇನ್ನಿತರ ಉತ್ಪಾದನೆ ಹೆಚ್ಚಿಸುವ ಉಪಕರಣಗಳ ಬಗ್ಗೆ ಮಾತನಾಡಿದರು.

ರಾಯಚೂರು ಕೃಷಿ ವಿವಿ ಕುಲಪತಿ ಡಾ. ಎಚ್. ಹನುಮಂತಪ್ಪ, ಕೆಎಲ್​ಇ ತಾಂತ್ರಿಕ ವಿವಿ ಡೀನ್ ಡಾ. ಮೀನಾ ಎಸ್.ಎಂ., ಡಾ. ಬಿ.ಡಿ. ಬಿರಾದಾರ, ಡಾ. ಎಚ್.ಬಿ. ಬಾಬಲದ, ಡಾ. ವಿಜಯಲಕ್ಷ್ಮೀ, ಡಾ. ಪ್ರೀತಿ ಪಾಟೀಲ, ಡಾ. ಬಾಣಪುರಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net