ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಸಿ

12MGKD1
Published on

ಮುಗಳಖೋಡ: ವಿದ್ಯಾರ್ಥಿಗಳು ಮೊಬೈಲ್ ಅವಶ್ಯಕತೆಗೆ ತಕ್ಕಂತೆ ಬಳಕೆ ಮಾಡಿ ಉತ್ತಮ ಜೀವನ ಕಂಡುಕೊಳ್ಳಬೇಕು ಎಂದು ಹಾರೂಗೇರಿ ಸನ್ನಸನ್ನಿ ಆಸ್ಪತ್ರೆ ಮುಖ್ಯ ವೈದ್ಯ ಯಲ್ಲಾಲಿಂಗ ಸನ್ನಸನ್ನಿ ಹೇಳಿದರು.

ಪಟ್ಟಣದ ಶ್ರೀ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಿದ್ದರಾಮೇಶ್ವರ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವಷರ್ದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆ ಮತ್ತು ಎನ್‌ಎಸ್‌ಎಸ್ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆಯ ಸಂಸ್ಥಾಪಕ ವ್ಯವಸ್ಥಾಪಕ ಅಶೋಕ ಕೊಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ತಮಾನದ ಜೀವಂತಿಕೆಯಲ್ಲಿ ವಿದ್ಯಾರ್ಥಿಗಳು ತಂದೆ-ತಾಯಿ ಗುರು ಹಿರಿಯರ ಆಸೆಗೆ ಚ್ಯುತಿ ಬಾರದಂತೆ ಸದಾಚಾರ, ಸದ್ವಿಚಾರ, ಸಂಸ್ಕೃತಿ, ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮುನ್ನುಗ್ಗಬೇಕು ಎಂದು ಕರೆ ನೀಡಿದರು.

ಮುಖ್ಯೋಪಾಧ್ಯಾಯ ವಿರುಪಾಕ್ಷಿ ಕರಡಿ, ಪ್ರಾಚಾರ್ಯ ಶಿವಾನಂದ ಹಂಚಿನಾಳ, ಗುರು ಜಂಬಗಿ, ಸರಸ್ವತಿ ಸಾರವಾಡೆ, ಸವಿತಾ ಮಗದುಮ್ಮ, ಪತ್ರಕರ್ತರಾದ ಸದಾಶಿವ ಬಡಿಗೇರ, ಶ್ರೀಮಂತ ಘಟನಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕವಿತಾ ಬೊರಂಗಾವಿ ಸ್ವಾಗತಿಸಿದರು. ಶ್ರೀದೇವಿ ಹುಲಗನಿ ನಿರೂಪಿಸಿದರು. ಪ್ರೀತಿ ಜಂಬಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net