

ಹುಬ್ಬಳ್ಳಿ: ಶ್ರೀ ಮಲ್ಲಿಕಾರ್ಜುನ ಬುಕ್ ಡಿಪೋ ಸಹಯೋಗದಲ್ಲಿ ಸಮೀಪದ ನವನಗರ ಈಶ್ವರನಗರದ ಶ್ರೀ ಮಾರುತಿ ವಿದ್ಯಾವರ್ಧಕ ಸಂಘದ ಅನುದಾನಿತ ಕನ್ನಡ ಪ್ರಾಥಮಿಕ ಶಾಲೆ ಮಕ್ಕಳಿಗೆ ಇತ್ತೀಚೆಗೆ ಉಚಿತವಾಗಿ ನೋಟ್‌ಬುಕ್ ವಿತರಿಸಲಾಯಿತು.
ಸಂಸ್ಥೆ ಸಂಸ್ಥಾಪಕ ಎಂ.ಬಿ. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ದಾನಿಗಳು ಕಲಿಕಾ ಸಾಮಗ್ರಿ ಕೊಟ್ಟಿದ್ದಾರೆ. ಇವುಗಳನ್ನು ಪಡೆದು ಓದಿನಲ್ಲಿ ಮುಂದಿರಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಎಸ್.ಎಸ್. ನಾಗಣಸೊರೆ ಅಧ್ಯಕ್ಷತೆ ವಹಿಸಿದ್ದರು.
ದಾನಿಗಳಾದ ವಿಶ್ವನಾಥ ಇಂಗಳಗಿ, ಭಾಸ್ಕರ ಡೊಂಗರೆ, ಮೋಹನ ಮಹಾಜನ್, ಉಮೇಶ ಶೆಟ್ಟರ್, ಬಸನಗೌಡ ಪಾಟೀಲ, ಕೆ.ಬಿ. ಹಂಪಸಾಗರ, ಪ್ರಧಾನ ಗುರು ಪಿ.ಆರ್. ರಾಮಗೇರಿ ಇತರರು ಇದ್ದರು.