ಜ್ಞಾನವನ್ನು ಸತ್ಕಾರ್ಯಕ್ಕೆ ಬಳಸಿಕೊಳ್ಳಿ

14 Harugeri1
ಹಾರೂಗೇರಿಯ ಚನ್ನವೃಷಭೇಂದ್ರ ಲೀಲಾಮಠದಲ್ಲಿ ಹಮ್ಮಿಕೊಂಡಿದ್ದ 41ನೇ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವದ ಎರಡನೇ ದಿನದ ಕಾರ್ಯ ಕ್ರಮದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿವಾನಂದ ಸ್ವಾಮೀಜಿ, ಮಾತೋಶ್ರೀ ಅನುಸೂಯಾ ತಾಯಿಯವರು ಇತರರಿದ್ದರು.
Published on

ಹಾರೂಗೇರಿ: ಅಜ್ಞಾನದ ಕತ್ತಲೆ ಕಳೆದು ಸುಜ್ಞ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವ ಗುರುವಿನ ಗುಲಾಮರಾಗಬೇಕು. ಯಾರಿಂದಲೂ ಕಸಿಯದ ಜ್ಞಾನ ಪಡೆದು ಸತ್ಕಾರ್ಯಕ್ಕೆ ಬಳಸಿಕೊಂಡಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದು ಸದ್ಗುರು ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಚನ್ನವೃಷಭೇಂದ್ರ ಲೀಲಾಮಠದ ಡಾ.ಶಿವಾನಂದ ಭಾರತಿ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 41ನೇ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹರ ಮುನಿದರೆ ಗುರು ಕಾಯುವನು. ಗುರು ಮುನಿದರೆ ಹರಿಹರ ಬ್ರಹ್ಮಾದಿಗಳಿಂದಲೂ ಕಾಯಲು ಸಾಧ್ಯವಿಲ್ಲ. ಹೀಗಾಗಿ, ಗುರು ಎಂಬ ಪದ ಪವಿತ್ರವಾದದು ಎಂದರು. ಹೇಮಕೂಟ ಹಂಪಿಯ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮೀಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಅಥಣಿಯ ಬಿ.ಎಂ. ಮುಜಾವರ ಸಾಹೇಬರು ಆಶೀರ್ವಚನ ನೀಡಿದರು.

ನೆರೆದಿದ್ದ ಶ್ರೀ ಮಠದ ಸಹಸ್ರಾರು ಸದ್ಭಕ್ತರು ವೇದಾಂತ ವೇದಿಕೆಯ ಮೂಲಕ ಪೂಜ್ಯರ ಆಶೀರ್ವಚನ ಆಲಿಸಿ ಪುನೀತರಾದರು. ಪರಮಭಕ್ತ ನೇಮಿನಾಥ ಕೊತ್ತಲಗಿ ಹಾಗೂ ಸಹೋದರರು ಎರಡನೇ ದಿನದ ಕಾರ್ಯಕ್ರಮದ ಮಹಾ ಪ್ರಸಾದ ವ್ಯವಸ್ಥೆ ಮಾಡಿದರು. ದಾವಣಗೆರೆ ಜಡಿಸಿದ್ದ ಶಿವಯೋಗೀಶ್ವರ ಶಾಂತಾಶ್ರಮದ ಶಿವಾನಂದ ಸ್ವಾಮೀಜಿ, ಅನಗವಾಡಿಯ ಪೂರ್ಣಾನಂದ ಆಶ್ರಮದ ಮಾತೋಶ್ರೀ ಅನುಸೂಯಾ ತಾಯಿಯವರು, ಸವಟಗಿಯ ಸಿದ್ಧಾರೂಢ ಮಠದ ನಿಂಗಾನಂದ ಸ್ವಾಮೀಜಿ, ಶಿವಗೊಂಡ ಧರ್ಮಟ್ಟಿ, ರಾಜು ಕರ್ಣವಾಡಿ, ವಿಠ್ಠಲ ಬಂತಿ, ಬಾಬು ಹಳ್ಳೂರ, ರಾಮಣ್ಣ ಗಸ್ತಿ, ಲಾಲಸಾಬ ಜಮಾದಾರ, ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಹೇಬ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net