ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ

30 tgp gruhlaxmi 3
ತಾಳಗುಪ್ಪದಲ್ಲಿ ಗೃಹಲಕ್ಷ್ಮೀ ಚಾಲನೆ ಕಾರ್ಯಕ್ರಮವನ್ನು ಲಕ್ಷ್ಮೀನಾರಾಯಣ ಬ್ಯಾಕೋಡ್ ಉದ್ಘಾಟಿಸಿದರು. ಪ್ರೇಮಾ ಭಾಸ್ಕರ್ ಶೆಟ್ಟಿ, ಗಣಪತಿ, ಅನ್ನಪೂರ್ಣಾ, ಲಲಿತಾ ಗೋಪಾಲ್, ಬಿ.ಸಿ.ಶಾಂತಾ, ಶ್ರೀಕಾಂತ್ ಇತರರಿದ್ದರು.
Published on

ತಾಳಗುಪ್ಪ: ಸರ್ಕಾರ ಗೃಹಲಕ್ಷ್ಮೀ ಯೋಜನೆ ಮೂಲಕ ನೀಡುವ 2 ಸಾವಿರ ರೂ.ಗಳನ್ನು ಮಕ್ಕಳ ವಿದ್ಯಾಭ್ಯಾಸದಂತಹ ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ತಾಳಗುಪ್ಪ ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಬ್ಯಾಕೋಡ್ ಸಲಹೆ ನೀಡಿದರು. ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಯೋಜನೆ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಸದುಪಯೋಗಪಡಸಿಕೊಳ್ಳುವುದು ತನ್ಮೂಲಕ ದೇಶದ ಅಭಿವೃದ್ಧಿಯತ್ತ ಕೈ ಜೋಡಿಸುವುದು ಜನರ ಕರ್ತವ್ಯವಾಗಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಗಣಪತಿ, ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಸಂಪೂರ್ಣ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಅನ್ನಪೂರ್ಣಾ ಲೋಕೇಶ್, ಪ್ರೇಮಾ ಭಾಸ್ಕರ್ ಶೆಟ್ಟಿ, ಲಲಿತಾ ಗೋಪಾಲ್, ಬಿ.ಸಿ.ಶಾಂತಾ, ಮಂಜು ಕನ್ನಡಿಗ, ಶ್ರೀಕಾಂತ್ ಗುಡ್ಡೇಮನೆ ಇತರರಿದ್ದರು. ಕಾರ್ಯಕ್ರಮಕ್ಕೆ ಹಾಕಿದ್ದ ರಂಗೋಲಿ ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net