ಸುಧಾರಿತ ಅಂಗಾಂಶ ಕೃಷಿ ಸಸಿ ಬಳಸಲಿ

9manju3
ಬೆಳಗಾವಿ ಅಂಬೇವಾಡಿ ಗ್ರಾಮದಲ್ಲಿ ಸೋಮವಾರ ಕೆಎಲ್​ಇ ಕೆವಿಕೆ, ಕೃಷಿ ಇಲಾಖೆ ಆಶ್ರಯದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಜರುಗಿತು. ಮಂಜುನಾಥ ಚೌರಡ್ಡಿ, ಸುವರ್ಣಾ ಲೋಹಾರ, ಡಾ.ಆನಂದ ಕುಮಾರ ಇತರರಿದ್ದರು.
Published on

ಬೆಳಗಾವಿ: ಅಂಬೇವಾಡಿ ಗ್ರಾಮದ ಸುತ್ತಮುತ್ತ ಕಬ್ಬು ಬೆಳೆಗಾರರು ಹೆಚ್ಚಾಗಿದ್ದು, ಕಡಿಮೆ ಇಳುವರಿ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಒ&92005 ಕಬ್ಬಿನ ತಳಿ ಸುಧಾರಿತ ಅಂಗಾಂಶ ಕೃಷಿ ಸಸಿಗಳನ್ನು ಬಳಕೆ ಮಾಡಿದಲ್ಲಿ ಇಳುವರಿ ಹೆಚ್ಚಿಸಲು ಸಾಧ್ಯವಿದೆ ಎಂದು ಕೆಎಲ್​ಇ ಕೆವಿಕೆ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.

ಅಂಬೇವಾಡಿ ಗ್ರಾಮದಲ್ಲಿ ಸೋಮವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮತ್ತಿಕೊಪ್ಪ ಕೆಎಲ್​ಇ ಕೆವಿಕೆ, ಕೃಷಿ ಇಲಾಖೆ, ಇಫೋ ಗೊಬ್ಬರ ಸಂಸ್ಥೆ ಮತ್ತು ಸ್ಥಳಿಯ ಗ್ರಾಪಂ ಆಶ್ರಯದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು. ಗ್ರಾಪಂ ಸದಸ್ಯೆ ಸುವರ್ಣಾ ಲೋಹಾರ, ಡಾ.ಆನಂದಕುಮಾರ, ಆತ್ಮ ಯೋಜನೆಯ ಮಲೀಕ್​ ನಾಯಿಕ, ರಾಜಶ್ರೀ ಜೈನ್​, ಪ್ರವಿಣ ಯಡಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net