ವೈದ್ಯರ ಸಲಹೆ ಮೇರೆಗೆ ಶ್ರವಣ ಸಾಧನ ಬಳಸಿ

ಕವಲೂರಿನಲ್ಲಿ ಹಮ್ಮಿಕೊಂಡಿದ್ದ ಟಿಬಿ ಜಾಗೃತಿ ಅಭಿಯಾನದಲ್ಲಿ ತಾಲೂಕು ಕ್ಷಯರೋಗ ಸೂಪರ್‌ವೈಸರ್ ಇಬ್ರಾಹಿಂ ಮಾತನಾಡಿದರು. ಬಿಎಚ್‌ಇಒ ಗಂಗಮ್ಮ, ವೈದ್ಯಾಧಿಕಾರಿ ಪ್ರವೀಣ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜಿ.ಎಸ್.ಬೂಸನೂರಮಠ, ಗವಿಸಿದ್ದಪ್ಪ, ಸಿಬ್ಬಂದಿ ಅನಿಲ್, ಸುಜತಾ, ಶಾಹಿನ್ ಬೇಗಂ, ಎಲ್ಲಮ್ಮ, ಪ್ರತಿಭಾ, ಬಸಮ್ಮ, ನೀಲಪ್ಪ ಇತರರಿದ್ದರು.
ಕವಲೂರಿನಲ್ಲಿ ಹಮ್ಮಿಕೊಂಡಿದ್ದ ಟಿಬಿ ಜಾಗೃತಿ ಅಭಿಯಾನದಲ್ಲಿ ತಾಲೂಕು ಕ್ಷಯರೋಗ ಸೂಪರ್‌ವೈಸರ್ ಇಬ್ರಾಹಿಂ ಮಾತನಾಡಿದರು. ಬಿಎಚ್‌ಇಒ ಗಂಗಮ್ಮ, ವೈದ್ಯಾಧಿಕಾರಿ ಪ್ರವೀಣ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜಿ.ಎಸ್.ಬೂಸನೂರಮಠ, ಗವಿಸಿದ್ದಪ್ಪ, ಸಿಬ್ಬಂದಿ ಅನಿಲ್, ಸುಜತಾ, ಶಾಹಿನ್ ಬೇಗಂ, ಎಲ್ಲಮ್ಮ, ಪ್ರತಿಭಾ, ಬಸಮ್ಮ, ನೀಲಪ್ಪ ಇತರರಿದ್ದರು.
Published on

ಅಳವಂಡಿ: ಪ್ರತಿಯೊಬ್ಬರೂ ಕಿವಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಹೇಳಿದರು.

ಸಮೀಪದ ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹವಾಮಾನ ಬದಲಾವಣೆ, ವಿಶ್ವ ಶ್ರವಣ ದಿನ ಮತ್ತು ನೂರು ದಿನದ ಟಿಬಿ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

ಕಿವಿಗೆ ಕಡ್ಡಿ, ಚೂಪಾದ ವಸ್ತು, ಎಣ್ಣೆ, ನೀರು ಹಾಕಬಾರದು. ಪಟಾಕಿ ಶಬ್ದ, ಧ್ವನಿವರ್ದಕ, ಕಾರ್ಖಾನೆ, ಡಿಜೆ ಮುಂತಾದ ಜೋರಾದ ಶಬ್ದಗಳಿಂದ ದೂರವಿರಬೇಕು. ಕಿವಿಗೆ ರಕ್ಷಾ ಕವಚ ಧರಿಸಬೇಕು. ಕಿವಿ ಸೋಂಕು ಕಂಡು ಬಂದರೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಕುಲುಷಿತ ನೀರಿನಲ್ಲಿ ಈಜಬೇಡಿ. ನಕಲಿ ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳಬೇಡಿ. ವೈದ್ಯರ ಸಲಹೆ ಇಲ್ಲದೆ ಶ್ರವಣ ಸಾಧನ ಬಳಸಬೇಡಿ ಎಂದರು.

ತಾಲೂಕು ಕ್ಷಯರೋಗ ಸೂಪರ್‌ವೈಸರ್ ಇಬ್ರಾಹಿಂ ಮಾತನಾಡಿ, ಒಬ್ಬ ಕ್ಷಯರೋಗಿ ಚಿಕಿತ್ಸೆ ಪಡೆಯದಿದ್ದರೆ ವರ್ಷಕ್ಕೆ 10 ರಿಂದ 15 ಜನರಿಗೆ ರೋಗ ಹರಡುತ್ತದೆ. ಆದ್ದರಿಂದ ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು. ಕ್ಷಯರೋಗ ಮೈಕ್ರೋ ಬ್ಯಾಕ್ಟಿರಿಯಾ ಟ್ಯೂಬರ್ ಕ್ಯೂಲೆಸಿಸ್ ಎಂಬ ಸೂಕ್ಷ್ಮಾಣು ಜೀವಿಯಿಂದ ಗಾಳಿಯ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ರೋಗದ ಕಣಗಳು ಬೇರೊಬ್ಬರಿಗೆ ಹರಡುತ್ತವೆ. ದೀರ್ಘಕಾಲ ಕೆಮ್ಮು, ಕಫ, ಕಫದಲ್ಲಿ ರಕ್ತ, ಹಸಿವಾಗದಿರುವುದು, ಸಂಜೆ ಜ್ವರ ಬರುವುದು ಈ ಲಕ್ಷಣಗಳಿದ್ದರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ. ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ ಸ್ವಾಸ್ಥೃ ಸಮಾಜ ನಿರ್ಮಿಸಿ ಎಂದು ಮನವಿ ಮಾಡಿದರು.

ವೈದ್ಯಾಧಿಕಾರಿ ಡಾ.ಪ್ರವೀಣ ಗುತ್ತೇದಾರ ಮಾತನಾಡಿ, ಹವಾಮಾನ ಬದಲಾವಣೆಯಿಂದ ಹರಡುವ ಕಾಯಿಲೆ ಬಗ್ಗೆ ಜಾಗ್ರತೆ ವಹಿಸಿ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾಯಿಲೆ ನಿರ್ಲಕ್ಷಿಸಬೇಡಿ ಎಂದರು.

ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಜಿ.ಎಸ್.ಬೂಸನೂರಮಠ, ಗವಿಸಿದ್ದಪ್ಪ ಗೊಂದಿಹೊಸಳ್ಳಿ, ಸಿಬ್ಬಂದಿ ಅನಿಲ್, ಸುಜತಾ, ಶಾಹಿನ್ ಬೇಗಂ, ಎಲ್ಲಮ್ಮ, ಪ್ರತಿಭಾ, ಬಸಮ್ಮ, ನೀಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net