

ತೇರದಾಳ: ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾರಬೇಕು. ಜಿಲ್ಲಾಧಿಕಾರಿಗಳು ಸೂಚಿಸಿದ ನಿಮಯಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪಿಎಸ್‌ಐ ಅಪ್ಪಣ್ಣ ಐಗಳಿ ಎಚ್ಚರಿಕೆ ನೀಡಿದರು.
ಪಟಾಕಿ ಅಂಗಡಿ ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಪಟಾಕಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅಂಗಡಿಕಾರರಿಗೆ ತಿಳಿಸಿದರು.
ಈಗಾಗಲೇ ಜಿಲ್ಲಾಧಿಕಾರಿಗಳು ಪಟಾಕಿ ವ್ಯಾಪಾರಸ್ಥರ ಸಭೆ ನಡೆಸಿ ಹಲವು ಸಲಹೆ ಸೂಚನೆಯ ಜತೆಗೆ ಮಾರ್ಗಸೂಚಿ ಆದೇಶ ನೀಡಿದ್ದಾರೆ.
ಆದ್ದರಿಂದ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಜನವಸತಿ ಪ್ರದೇಶಗಳಲ್ಲಿ ಪಟಾಕಿ ಹಚ್ಚಲು ನಿರ್ಬಂಧ ಹೇರಲಾಗಿದೆ. ಯಾವುದೇ ಅನಾಹುತಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು. ನಾಗರಾಜ ಕಾಂಬಳೆ, ವಿವೇಕ ಸುವರ್ಣಖಂಡಿ, ಪಟಾಕಿ ವ್ಯಾಪಾರಸ್ಥರಾದ ಶ್ರೀಶೈಲ ಪೂಜಾರಿ (ಗುರವ), ಶ್ರೀಶೈಲ ಮುಕರಿ, ಮಹಾಂತೇಶ ಸೊಟ್ಟಿ ಇದ್ದರು.