ದೀಪಾವಳಿಯಲ್ಲಿ ಹಸಿರು ಪಟಾಕಿಗಳನ್ನು ಬಳಸಿ

Padavidhara
Published on

ಕಾರವಾರ: ಹಬ್ಬ ದೀಪಾವಳಿಯನ್ನು ಸುರಕ್ಷಿತವಾಗಿ ಯಾವುದೇ ಅವಗಡಗಳುಸಂಭವಿಸದಂತೆ ಆಚರಿಸಲು ಈ ಮುಂದಿನಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ.

ದೀಪಾವಳಿ ಹಬ್ಬದಂದು ಪಟಾಕಿಯನ್ನು ಸಿಡಿಸುವುದು ಸರ್ವೆ ಸಾಮಾನ್ಯವಾದರೂ ಪಟಾಕಿ ಸಿಡಿಸುವುದರಿಂದ ಆಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ ಮತ್ತು ಪರಿಸರ ಮಾಲಿನ್ಯವಾಗಿ ಉತ್ತಮ ವಾತಾವರಣವಿರದೇ ಸುಮಾರು ಮೂರರಿಂದ ನಾಲ್ಕುದಿನಗಳವರೆಗೆ ಹೊಗೆಯಿಂದ ಕೂಡಿದ ವಾತಾವರಣವಿರುತ್ತದೆ. ಇದು ಚಿಕ್ಕ ಮಕ್ಕಳ, ವಯಸ್ಸಾದವರ ಹಾಗೂ ಪ್ರಾಣಿ, ಪಕ್ಷಿಗಳ ಆರೋಗ್ಯದಮೇಲೆ ತೀವೃವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಪಟಾಕಿ ಸಿಡಿಸದಿರುವುದು ಉತ್ತಮ. ಪಟಾಕಿಯನ್ನು ಸಿಡಿಸುವುದೇ ಆದರೆ ಹಸಿರು ಪಟಾಕಿಗಳನ್ನು ಸಿಡಿಸಿ ಹಾಗೂ ಹೆಚ್ಚಿನ ಹೊಗೆ ಉಂಟು ಮಾಡುವ ಪಟಾಕಿಗಳಾದ ಹಾವಿನಬಾಲ / ಹನುಮನ ಬಾಲ ಈ ತರಹದ

ಪಟಾಕಿಗಳನ್ನು ಉಪಯೋಗಿಸಬೇಡಿ.

ಮಾನ್ಯ ರಾಷ್ಟೀಯ ಹಸಿರು ಪ್ರಾಧಿಕಾರದ ಆದೇಶದಂತೆ ಇವರು ಶಿಫಾರಸ್ಸು ಮಾಡಿದ ಹಸಿರು ಪಟಾಕಿಗಳನ್ನು ಮಾತ್ರ

ಉಪಯೋಗಿಸುವಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸ್ಪಷ್ಟ ನಿರ್ದೇಶನಗಳನ್ನು ನೀಡಿರುತ್ತದೆ. ಹಸಿರು ಪಟಾಕಿಯ ಮೇಲೆ ಹಸಿರು

ಬಣ್ಣದಲ್ಲಿ CSIR (Council of Scientific & Industrial Research ) & NEERI (National

Environmental Engineering Research Institute) ಚಿಹ್ನೆ ಮತ್ತು ಕ್ಯೂಆರ್ ಕೋಡ್‌ಗಳನ್ನು

ಮುದ್ರಿಸಲಾಗಿರುತ್ತದೆ. ಅಂತಹ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಾರ್ವಜನಿಕರು ಬಳಸಲು / ಉಪಯೋಗಿಸಲು

ಅವಕಾಶ ಇರುತ್ತದೆ. ರಾತ್ರಿ 8 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶವಿರುತ್ತದೆ. 10 ಗಂಟೆಯ ನಂತರ

ಪಟಾಕಿ ಸಿಡಿಸಬಾರದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

ಪಟಾಕಿ ಸಿಡಿಸುವುದರಿಂದ ಆಗುವ ಪರಿಣಾಮಗಳು:- ಪಟಾಕಿಗಳಲ್ಲಿ ಭಾರಲೋಹವನ್ನು ಬಳಸುವುದರಿಂದ ಮಾನವನ,

ಪ್ರಾಣಿಗಳ ಪಕ್ಷಿಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವುದಲ್ಲದೇ, ಹೆಚ್ಚಾಗಿ ವಾಯು ಮಾಲಿನ್ಯದಿಂದ ಪುಪ್ಪಸ ಸಂಬAಧಿ

ರೋಗಗಳು ಹೆಚ್ಚಾಗುತ್ತವೆ. ಅತಿ ಶಬ್ಧದಿಂದ ಹೃದಯಾಘಾತವಾಗುವ ಸಂಭವವಿರುತ್ತದೆ ಹಾಗೂ ಕಿವಿಗೆ ತೊಂದರೆಯಾಗುವ

ಸಂಭವವಿರುತ್ತದೆ. ಪಟಾಕಿಯ ಗಂಧಕದ ಹೊಗೆಯಿಂದಾಗಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ ಹಾಗೂ ಪಟಾಕಿ

ಸಿಡಿತದಿಂದ ಬೆಂಕಿ ಕಿಡಿ ಕಣ್ಣಿಗೆ ಬಿದ್ದರೆ ಕಣ್ಣು ಕಳೆದುಕೊಳ್ಳುವ ಸಂಭವವಿರುತ್ತದೆ.

120 ಡೆಸಿಬಲ್‌ಗಿಂತ ಹೆಚ್ಚು ಪ್ರಮಾಣದ ಶಬ್ಧವಿದ್ದರೆ ಕಿವಿಗಳಿಗೆ ಹಾನಿಕಾರಕ. ಇನ್ನೂ ಪಟಾಕಿಗಳ ಶಬ್ಧ 100 ರಿಂದ 120

ಡೆಸಿಬಲ್‌ಗಳಷ್ಟಿರುತ್ತದೆ. ಇದರಿಂದ ಮಕ್ಕಳು, ವಯೋವೃದ್ಧರಿಗೆ, ಸಾಕು ಪ್ರಾಣಿಗಳಿಗೆ ಕಿವುಡುತನ ಉಂಟಾಗಬಹುದು.

ಮುಂಜಾಗೃತಾ ಕ್ರಮಗಳು: ಹಸಿರು ಪಟಾಕಿ ಸಿಡಿಸದೇ ಇರುವುದರಿಂದ ವಾಯು ಮಾಲಿನ್ಯ, ಶಬ್ಧಮಾಲಿನ್ಯ ಮತ್ತು ಮತ್ತು

ಪರಿಸರ ಮಾಲಿನ್ಯವಾಗುವುದಿಲ್ಲ ಹಾಗೂ ಉತ್ತಮ ವಾತಾವರಣವಿರುತ್ತದೆ. ಪಟಾಕಿ ಸಿಡಿಸುವುದಾದರೆ ಹಸಿರು ಪಟಾಕಿಗಳನ್ನು ಮಾತ್ರ

ಸಿಡಿಸಿ ಹಾಗೂ ಮುಂಜಾಗೃತಾ ಕ್ರಮವಾಗಿ ಪಟಾಕಿ ಹೊಡೆಯುವ ಸ್ಥಳದಲ್ಲಿ ಒಂದು ಬಕೆಟ್‌ನಲ್ಲಿ ನೀರನ್ನು ಸನಿಹ ಇಟ್ಟುಕೊಳ್ಳುವುದು.

ಹಸಿರು ಪಟಾಕಿ ಸಿಡಿಸುವ ಸಮಯದಲ್ಲಿ ನೈಲಾನ್ / ಸಿಂಥಟಿಕ್ ಬಟ್ಟೆಗಳನ್ನು ಧರಿಸದೇ ಕೇವಲ ಹತ್ತಿಯ (ಕಾಟನ್) ಬಟ್ಟೆಯನ್ನು

ಧರಿಸುವುದು.

ಹಸಿರು ಪಟಾಕಿಗಳನ್ನು ಸಿಡಿಸಿದ ನಂತರ ಸಿಡಿದಿದೆಯೇ ಎಂದು ಪರಿಶೀಲಿಸಲು ಹೋಗಬಾರದು ಏಕೆಂದರೆ ತಕ್ಷಣವೇ

ಸಿಡಿಯುವ ಸಂಭವವಿರುತ್ತದೆ ಅಂತಹ ಸಂದರ್ಭದಲ್ಲಿ ಉದ್ದ ಕೋಲಿನಿಂದ ದೂರ ತಳ್ಳುವುದು ಸುರಕ್ಷಿತ. ಹಸಿರು ಪಟಾಕಿಗಳನ್ನು ಸಿಡಿಸುವ

ಸಂದರ್ಭದಲ್ಲಿ ತೀರ ಕತ್ತಲಿನಲ್ಲಿ ಸಿಡಿಸಬೇಡಿ ಹಾಗೂ ಹೆಚ್ಚಿನ ಬೆಳಕಿನಲ್ಲಿ ಪಟಾಕಿ ಸಿಡಿಸಿ ಹಾಗೂ ಸಣ್ಣ ಮಕ್ಕಳನ್ನು ದೂರವಿರಿಸಿ ಕಿವಿ,

ಕಣ್ಣುಗಳಿಗೆ ಹಾನಿಯಾಗದಂತೆ ತಡೆಯುವುದು. ಹಸಿರು ಪಟಾಕಿ / ರಾಕೆಟ್‌ಗಳನ್ನು ಬಿಡುವಾಗ ಅವು ಇತರರ ಮನೆಗಳ ಮೇಲೆ / ಒಣಗಿದ

ತೆಂಗಿನಗರಿ ಹೊದಿಸಿದ ಮಾಡಿನ ಮೇಲೆ ಬೀಳದಂತೆ ಕ್ರಮ ವಹಿಸಿ.

ಹಸಿರು ಪಟಾಕಿ ಸಿಡಿಸುವಾಗ ಪಟಾಕಿ ಹಚ್ಚಲು ಉಪಯೋಗಿಸುವ ಊದಬತ್ತಿ / ಗಂಧದಕಡ್ಡಿ ಹೆಚ್ಚಿನ ಉದ್ದವಿರುವಂತೆ

ನೋಡಿಕೊಳ್ಳಿ ಹಾಗೂ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು, ಪಕ್ಕದಲ್ಲಿರುವವರನ್ನು ಗಮನವಿರಿಸಿ ಸುರಕ್ಷತೆಯಿಂದ ಹಸಿರು ಪಟಾಕಿ

ಸಿಡಿಸುವುದು. ಪಟಾಕಿ ಸಿಡಿಸಿದ ನಂತರ ಬರುವ ಘನ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ/ನಗರಸಭೆಯ ಕಸದ ಗಾಡಿಗೆ

ನೀಡಬೇಕು.

ದೀಪಗಳನ್ನು ಬೆಳಗಿಸುವ ಮೂಲಕ ಸುರಕ್ಷಿತ ಹಾಗೂ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸೋಣ. ಪಟಾಕಿ ಸಿಡಿಸುವುದೇ

ಆದರೆ ಕೇವಲ ಹಸಿರು ಪಟಾಕಿಗಳನ್ನು ಸುರಕ್ಷತೆಯಿಂದ ಸಿಡಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net